ಸತಾರಾ : ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಟೋಗೆ ನಿಲ್ಲುವಂತೆ ಹೇಳಿದ್ದಕ್ಕೆ, ಕುಡುಕ ಚಾಲಕ ಅವರನ್ನು 120 ಮೀಟರ್ ದೂರ ಅವರನ್ನು ಎಳೆದೊಯ್ದಿರುವ ಘಟನೆ ಸತಾರಾದಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿ ಭಾಗ್ಯಶ್ರೀ ಜಾಧವ್ ಸತಾರಾದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಟೋ ಚಾಲಕನ ಬಗ್ಗೆ ಅನುಮಾನ ಬಂದು ಆಟೋವನ್ನು ತಡೆದು ನಿಲ್ಲಿಸಿದ್ದಾರೆ. ಆದರೆ ಕುಟುಕ ಡ್ರೈವರ್ ಆಕೆಯನ್ನು ಆಟೋದಲ್ಲಿ 120 ಮೀಟರ್ ದೂರ ಎಳೆದೊಯ್ದಿದ್ದಾನೆ. ಆಟೋ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದೆ. ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಭಾಗ್ಯಶ್ರೀ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
For More Updates Join our WhatsApp Group :