ಮೈಸೂರು: ಮೈಸೂರಿನ ದಮ್ಮನಕಟ್ಟೆ ಸಫಾರಿ ವೇಳೆ ಹುಲಿಯೊಂದು ಬಿಂದಾಸ್ ಆಗಿ ಓಡಾಡುತ್ತಿರುವ ದೃಶ್ಯ ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡಿತ್ತು. ಅಪರೂಪದ ದೃಶ್ಯ ಪ್ರವಾಸಿಗರ ಮೊಗದಲ್ಲಿ ಸಂತಸ ತಂದಿದೆ. ಕಬಿನಿ ಹಿನ್ನೀರು ಮತ್ತು ಹೆಚ್.ಡಿ.ಕೋಟೆ ಪ್ರದೇಶಕ್ಕೆ ಹೊಂದಿಕೊಂಡಿರುವ ದಮ್ಮನಕಟ್ಟೆಯು ವನ್ಯಜೀವಿ ಸಫಾರಿ ತುಂಬಾ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಸಫಾರಿ ವೇಳೆ ಹುಲಿಯನ್ನು ಕಂಡ ಪ್ರವಾಸಿಗರು, “ಅಲ್ಲಿ ಸರ್ ನೋಡಿ ಅಯ್ಯೋ, ಸಕ್ಕತ್ತಾಗಿದೆ!” ಎಂದು ಅಚ್ಚರಿಯಿಂದ ಹೇಳಿಕೊಂಡಿದ್ದಾರೆ.
ಇನ್ನು ಕೆಲವು ಪ್ರವಾಸಿಗರು ಹುಲಿಯ ನಿರ್ಭೀತ ಓಡಾಟ ನೋಡಿ “ಚಿನ್ನ, ಚಿನ್ನ” ಎಂದು ಪ್ರೀತಿಯಿಂದ ಕೂಗಿದ್ದಾರೆ. ಈ ದೃಶ್ಯವು ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಅವಿಸ್ಮರಣೀಯ ಕ್ಷಣವನ್ನು ನೀಡಿದೆ.
For More Updates Join our WhatsApp Group :
