ಕೇಂದ್ರ ಬಿಜೆಪಿ ನಾಯಕರ ದಂಡು ರಾಜ್ಯಕ್ಕೆ ; ಚುನಾವಣಾ ಪ್ರಚಾರದ ಗಿಮಿಕ್ ಶುರು..?

ರಾಜ್ಯ ಬಿಜೆಪಿ ಮೇಲೆ ನಂಬಿಕೆ ಇಲ್ಲವಾಯ್ತಾ..?

ಕರ್ನಾಟಕ : ರಾಜ್ಯ ನಾಯಕರ ಸಾಮರ್ಥ್ಯದ ಬಗ್ಗೆ ಮೋದಿ-ಅಮಿತ್ ಷಾ ಗೆ ಅಪನಂಬಿಕೆ ಬಂದಂತಿದೆ.

ಬಿಜೆಪಿ ಅಧ್ಯಕ್ಷ ನಡ್ಡಾ ಹಾಗೂ ನಿತಿನ್  ಗಡ್ಕರಿಗೂ ಅಪನಂಬಿಕೆ ಬಂದಿದೆ‌.

ಹಾಗಾಗಿ ಕರ್ನಾಟಕ ಕ್ಕೆ ಓಡೋಡಿ ಬರುತ್ತಿರುವ ಕೇಂದ್ರ ನಾಯಕರು ತಮ್ಮ ಪಾಡಿಗೆ ತಾವು ಚುನಾವಣಾ ಪ್ರಚಾರದ ಗಿಮಿಕ್ ಆರಂಭಿಸಿದ್ದಾರೆ‌.

ನಿನ್ನೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ ನಡೆಸಿದ ರೋಡ್ ಶೋ ಇದಕ್ಕೆ ಪುಷ್ಟಿನೀಡುತ್ತಿದೆ.

ಗುಜರಾತ್ ನಲ್ಲಿ ಮಾಡಿದ್ದ ಮಾಸ್ಟರ್ ಪ್ಲಾನ್

ಗುಜರಾತ್ ನಲ್ಲಿ ಸಕ್ಸಸ್ ಆಗಿದ್ದ ರೋಡ್ ಶೋ ಪ್ಲಾನ್ ಇದೀಗ ಕರ್ನಾಟಕಕ್ಕೂ ಪ್ರಯೋಗವಾಗ್ತಿದೆ.

ಸೂರತ್ ಹಾಗೂ ಅಹಮದಾಬಾದ್ ನಲ್ಲಿ ರೋಡ್ ಶೋ‌ ನಡೆಸಿದ್ದ ಮೋದಿ, ಅದೇ ಮಾದರಿಯಲ್ಲಿ ನಿನ್ನೆ ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸಿ ಜನರ ಮನಸ್ಸಿನಲ್ಲಿ ಬಿಜೆಪಿ ಪರ ಒಲವು ಮೂಡಿಸುವ ಕೆಲಸ ಮಾಡಿದ್ದಾರೆ.

ಬರೋಬ್ಬರಿ 9ಕಿ.ಮೀ ರೋಡ್ ಶೋ ನಡೆಸಿದ ನರೇಂದ್ರ ಮೋದಿ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬುಡ ಮತ್ತಷ್ಟು ಬಿಗಿಯಾಗುವಂತೆ ಮಾಡಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.

ಇನ್ಮುಂದೆ ಮೋದಿ ಬಂದಾಗಲೆಲ್ಲಾ ಇರುತ್ತಾ ರೋಡ್ ಶೋ..?

ಹೌದು, ನಿನ್ನೆಯ ರೋಡ್ ಶೋ ಹುಬ್ಬಳ್ಳಿ – ಧಾರವಾಡದ ಅವಳಿ ನಗರ ಹಾಗೂ ಉತ್ತರ‌ ಕರ್ನಾಟಕ ಭಾಗದ ಜನರಲ್ಲಿ ಸಂಚಲನ ಮೂಡಿಸಿದೆ. ಹಾಗಾಗಿ ಜನವರಿ 19ಕ್ಕೆ ಮತ್ತೆ ರಾಜ್ಯಕ್ಕೆ ಬರುತ್ತಿರುವ ನರೇಂದ್ರ ಮೋದಿ ಮತ್ತೊಂದು ರೋಡ್ ಶೋ ನಡೆಸುವುದರಲ್ಲಿ ಅನುಮಾನವೇ ಇಲ್ಲ.

ಯಾದಗಿರಿ, ಕಲಬುರಗಿಗೆ ನರೇಂದ್ರ ಮೋದಿ ಭೇಟಿ ಹಿನ್ನೆಲೆ ರೋಡ್ ಶೋ ಪ್ಲಾನ್ ಈಗಾಗಲೇ ಮಾಡಿಕೊಳ್ಳಲಾಗಿದೆ‌. ಇದರಿಂದ ಮತ್ತಷ್ಟು ಮತಗಳನ್ನು ಸೆಳೆಯುವ ಪ್ಲಾನ್‌ ಮೋದಿಯದ್ದು.

ಕರ್ನಾಟಕದ ಜನ ಒಪ್ಕೋತಾರಾ ಪ್ರಧಾನಿ ಮೋದಿಯ ಶೋ..?

ಕರ್ನಾಟಕಕ್ಕೆ ಕೊಡುಗೆ ನೀಡದ ಮೋದಿಯ ರೋಡ್ ಶೋ ಫ್ಲಾಪ್ ಆಗುತ್ತಾ…?

ಬರೀ ಚುನಾವಣೆ ಗೆಲ್ಲೋದಕ್ಕೆ ಮಾತ್ರಾನಾ ಈ ರೋಡ್ ಶೋ ನಾಟಕವನ್ನ ಕರ್ನಾಟಕದ ಜನ ನಂಬುತ್ತಾರಾ, ಇದು ಯಕ್ಷ ಪ್ರಶ್ನೆ. ನೋಟ್ ಅಮಾನ್ಯ, ಗ್ಯಾಸ್ ಬೆಲೆ, ದಿನ ಬಳಕೆ ವಸ್ತುಗಳು, ಉದ್ಯೋಗ ಕಡಿತ, ಸಾಲದ ಮೇಲಿನ ಬಡ್ಡಿ, ರೈತರ ಗೊಬ್ಬರಕ್ಕೆ ಜಿಎಸ್ಟಿ, ಅಕ್ಕಿ ಕಡಿತ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಇಷ್ಟೆಲ್ಲ ನ್ಯೂನತೆಗಳನ್ನಿಟ್ಟುಕೊಂಡು ಕೇವಲ ರೋಡ್ ಶೋ‌ ನಡೆಸಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆಂದರೆ ರಾಜ್ಯ ನಾಯಕರ್ಯಾರೂ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸೋದಕ್ಕೆ ಸಮರ್ಥರಿಲ್ಲವಾ ಎಂಬೋದು ಪ್ರಶ್ನೆ.

ಅಲ್ಲಿಗೆ ಪ್ರಧಾನಿಗಳೇ ರೋಡ್ ಶೋ, ಸಮಾವೇಶಗಳಿಗೆ ಓಡೋಡಿ ಬರ್ತಾರೆ ಎನ್ನೋದಾದರೆ. ರಾಜ್ಯ ಬಿಜೆಪಿ ನಾಯಕರು ಯಾವ ಮುಖ ಹೊತ್ತು ಮತ ಕೇಳುತ್ತಾರೆ.. ಈ ಬಾರಿಯೂ ಮೋದಿಗಾಗಿ ನಮ್ಮನ್ನು ಗೆಲ್ಲಿಸಿ ಎಂದು ಮತ ಕೇಳ್ತಾರಾ..? ಅಥವಾ ಅಭಿವೃದ್ಧಿಗಾಗಿ ಮತ ಕೇಳುತ್ತಾರಾ.. ಉತ್ತರ ಕೊಡುವ ಜವಾಬ್ದಾರಿ ರಾಜ್ಯದ ಮತದಾರರದ್ದು.

ಪ್ರಗತಿ ಟಿವಿ, ವೆಬ್ ನ್ಯೂಸ್ ಬ್ಯೂರೋ

Pragati TV Social Connect for more latest u

Leave a Reply

Your email address will not be published. Required fields are marked *