ಇಂದು ಬೆಂಗ್ಳೂರಿನಲ್ಲಿ RCB V/s KKR ನಡುವೆ ಹೈವೋಲ್ಟೇಜ್‌ ಕದನ

ಬೆಂಗಳೂರು: ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮಾ.29) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸಜ್ಜಾಗಿದೆ

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಇದು 3ನೇ ಪಂದ್ಯವಾಗಿದ್ದು, ತವರಿನಲ್ಲಿ ನಡೆಯುತ್ತಿರುವ 2ನೇ ಪಂದ್ಯವಾಗಿದೆ. ಇನ್ನೂ ಕೆಕೆಆರ್‌ಗೆ ಆವೃತ್ತಿಯ 2ನೇ ಪಂದ್ಯವಾಗಿದೆ. ಇತ್ತಂಡಗಳು ಈವರೆಗೆ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 14 ರಲ್ಲಿ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ 18 ಪಂದ್ಯಗಳಲ್ಲಿ ಜಯಗಳಿಸಿದೆ. ಕೆಕೆಆರ್ ವಿರುದ್ಧ ಬೆಂಗಳೂರು ತಂಡ ಗರಿಷ್ಠ ರನ್‌ 213 ಆಗಿದ್ದರೆ, ಬೆಂಗಳೂರು ತಂಡದ ವಿರುದ್ಧ ಕೆಕೆಆರ್‌ ಗಳಿಸಿರುವ ಗರಿಷ್ಠ ರನ್‌ 222 ರನ್‌ ಆಗಿದೆ

ಬೆಂಗಳೂರು ಮೈದಾನವು ಚಿಕ್ಕ ಬೌಂಡರಿಗಳನ್ನು ಹೊಂದಿರುವುದರಿಂದ ಇದು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಪವರ್‌ ಹಿಟ್ಟರ್‌ಗಳಿದ್ದಾರೆ. ಹೀಗಾಗಿ ಬ್ಯಾಟರ್‌ಗಳಿಗೆ ಪಿಚ್‌ ಸ್ವರ್ಗವಾಗಿದ್ದು, ರನ್‌ ಹೊಳೆ ಹರಿಯುವ ಸಾಧ್ಯತೆಗಳಿವೆ.

17ನೇ ಆವೃತ್ತಿಯಲ್ಲಿ ಮತ್ತೆ ತವರು ತಂಡಕ್ಕೆ ಮೆಂಟರ್‌ ಆಗಿ ಮರಳಿರುವ ಕೆಕೆಆರ್‌ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹಾಗೂ ಕೊಹ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿದ್ದ ಗಂಭೀರ್‌ ಹಾಗೂ ಆರ್‌ಸಿಬಿ ಆಟಗಾರ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದು, ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

Leave a Reply

Your email address will not be published. Required fields are marked *