5 ತಿಂಗಳಲ್ಲಿ 15.12 ಲಕ್ಷ ಜನರಿಗೆ ಆಘಾತ.!
ಬೆಂಗಳೂರು : ಅನರ್ಹವಾಗಿ ಬಿಬಿಎಲ್ ಕಾರ್ಡ್ ಹೊಂದಿರುವವರ ವಿರುದ್ಧ ಸಮರ ಮುಂದುವರಿಸಿರುವ ರಾಜ್ಯ ಸರ್ಕಾರ ಕಳೆದ 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಭಾರಿ ಆಘಾತ ನೀಡಿದೆ. ಅನರ್ಹರನ್ನು ಹೆಕ್ಕಿ ಹೆಕ್ಕಿ ಗುರುತಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಈ ಪೈಕಿ ಸುಮಾರು ಐದೂವರೆ ಸಾವಿರ ಬಿಪಿಎಲ್ ಕಾರ್ಡ್ಗಳನ್ನು ಶಾಶ್ವತವಾಗಿ ರದ್ದು ಮಾಡಿದೆ. 4 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ಬಿಪಿಎಲ್ನಿಂದ ಎಪಿಎಲ್ ಆಗಿ ಬದಲಾವಣೆ ಮಾಡಲಾಗಿದೆ. 23 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳು ತಾತ್ಕಾಲಿಕವಾಗಿ ರದ್ದುಗೊಂಡಿರೋದು ಫಲಾನುಭವಿಗಳ ನಿದ್ದೆಗೆಡಿಸಿದೆ.
ಕಳೆದ 5 ತಿಂಗಳ ಕಾರ್ಯಾಚರಣೆ ಹೇಗಿದೆ?
- ಬಿಪಿಎಲ್ನಿಂದ ಎಪಿಎಲ್ಗೆ ಪರಿವರ್ತನೆಗೊಂಡ ಕಾರ್ಡ್ಗಳು – 4.09 ಲಕ್ಷ (14,68,540 ಭಾದಿತರು)
- ರದ್ದಾಗಿರುವ ಬಿಪಿಎಲ್ ಕಾರ್ಡ್ಗಳು – 5,632 (9,826 ಭಾದಿತರು)
- ತಾತ್ಕಾಲಿಕವಾಗಿ ಅಮಾನತ್ತಾದ BPL ಕಾರ್ಡ್ಗಳು- 23,068 (34,617 ಭಾದಿತರು)
ಮತ್ತೊಂದೆಡೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಬದಲಾಗಿ ಅವು ಅನರ್ಹರ ಪಾಲಾಗುತ್ತಿದೆ ಎಂದು ಜನ ಸಾಮಾನ್ಯರಿಂದಲೂ ಆಕ್ರೋಶ ಕೇಳಿಬಂದಿದೆ. ಕಾರು, ಬಂಗಲೆ, ಜಮೀನು ಇರುವ ಮಂದಿಯೇ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಹೀಗಾಗಿ ಅನರ್ಹರನ್ನು ಗುರುತಿಸಿ ಅವರ ಕಾರ್ಡ್ ರದ್ದು ಮಾಡುವ ಕಾರ್ಯ ತೀವ್ರಗೊಳಿಸಬೇಕು. ಕಡು ಬಡವರು, ದುಡಿದು ತಿನ್ನುವ ಮಂದಿಗೆ ಬಿಪಿಎಲ್ ಕಾರ್ಡ್ ಸಿಗಬೇಕು. ಕಾರ್ಯಾಚರಣೆ ಹೆಸರಲ್ಲಿ ಬಡವರ ಕಾರ್ಡ್ ಕಿತ್ತುಕೊಳ್ಳದೆ, ಶ್ರೀಮಂತರಿಗೆ ಬಿಸಿ ಮುಟ್ಟಿಸಬೇಕು ಎಂದು ಆಹಾರ ಇಲಾಖೆಯನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.
For More Updates Join our WhatsApp Group :




