ನಕಲಿ ATS ಬೆದರಿಕೆ ನೀಡಿ ಲಕ್ಷಾಂತರ ರೂ. ದೋಚಿದ ಖದೀಮರು.
ಬೆಂಗಳೂರು: ದಿನೇ ದಿನೇ ಸೈಬರ್ ಚೋರರ ಕಾಟ ಹೆಚ್ಚಾಗುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಇವರ ವಂಚನೆಗೆ ಬಲಿಯಾಗುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ದೋಚುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇವರ ಹಾವಳಿ ಹೆಚ್ಚಾಗಿದೆ. ಇತ್ತೀಚಿಗೆ ಇಂತಹ ಮೋಸಕ್ಕೆ ಉಪೇಂದ್ರ ದಂಪತಿಗಳು ಕೂಡ ಒಳಗಾಗಿದ್ದರು. ಪೊಲೀಸ್, ಎನ್ಐಎ ಹೀಗೆ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ಅರೆಸ್ಟ್ ಮಾಡಿ ಲಕ್ಷ ಲಕ್ಷ ಹಣ ದೋಚಿರುವ ಅದೆಷ್ಟೊ ಘಟನೆಗಳು ವರದಿಯಾಗಿದೆ. ಇದರ ಬಗ್ಗೆ ದಿನನಿತ್ಯ ಒಂದಲ್ಲ ಒಂದು ಸುದ್ದಿಯಾಗುತ್ತಿದ್ದರೂ ಜನ ಮತ್ತೆ ಮತ್ತೆ ಮೋಸ ಹೋಗುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯೂ ಕೂಡ ಜನರಿಗೆ ಎಚ್ಚರಿಕೆಯನ್ನು ನೀಡುತ್ತ ಬಂದಿದೆ. ಇದೀಗ ಈ ವಂಚಕರು ಸುದೀಪ್ ಅಭಿಮಾನಿಯೊಬ್ಬರಿಗೆ ‘ATS'(ಭಯೋತ್ಪಾದನಾ ನಿಗ್ರಹ ದಳ) ಹೆಸರಿನಲ್ಲಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಕೂಡ ಬಳಕೆಯಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಈ ಆರೋಪದಿಂದ ನಿಮಗೆ ಮುಕ್ತಿ ಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ನಾವು ಹೇಳಿದಂತೆ ಕೇಳಿದ್ರೆ ಮಾತ್ರ ನಿಮಗೆ ಸರ್ಟಿಫಿಕೇಟ್ ಆಫ್ ಇನ್ವಸೇನಟ್ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಬೆದರಿಕೆಗೆ ಭಯಗೊಂಡ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಣ ಕಳೆದುಕೊಂಡಿದ್ದಾರೆ.
ಈ ವಂಚನೆ ಬಗ್ಗೆ ವಿಸ್ತಾರವಾಗಿ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಂಚಿಕೊಂಡಿದ್ದಾರೆ. “ನನಗೆ ಒಬ್ಬ ವ್ಯಕ್ತಿ ಕಾಲ್ ಮಾಡಿ, ನಾವು ಎಟಿಎಸ್ ನಿಂದ ಕರೆ ಮಾಡುತ್ತಿದ್ದೇವೆ. ದೆಹಲಿ ರೆಡ್ ಫೋರ್ಟ್ ಬ್ಲಾಸ್ಟ್ ನಲ್ಲಿ ನಿಮ್ಮ ಕೈವಾಡವಿದೆ ಎಂದು ಹೇಳಿದ್ರು, ನನಗೂ ಸ್ವಲ್ಪ ಹೆದರಿಕೆ ಆಯಿತು. ಇಲ್ಲ ಸರ್ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದೆ. ಆದರೆ ಅವರು ನಿಮ್ಮ ಕೈವಾಡ ಇದೆ ಎಂಬ ಸಾಕ್ಷಿ ಸಿಕ್ಕಿದೆ. ನಮ್ಮ ಎನ್ ಐ ಎ ಟೀಂ ಸದ್ಯದಲ್ಲೆ ಕಾಲ್ ಮಾಡುತ್ತದೆ ಎಂದು +91 9620122894, +91 6262656645 ನಿಂದ ವೀಡಿಯೋ ಕರೆ ಮಾಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ, ನಾನು ಗೌರವ್ ಎನ್ ಐ ಎ ಆಫೀಸರ್, ನಿಮ್ಮ ವಿಡಿಯೋ ಹೇಳಿಕೆಬೇಕು ಎಂದು ನನ್ನ ವೈಯಕ್ತಿಕ ದಾಖಲೆಗಳನ್ನು ಕೇಳಿದ್ದಾರೆ. ಜತೆಗೆ ನನ್ನ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೂಡ ಕೇಳಿದ್ದರೆ, ನಾವು ಹೇಳುವರೆಗೆ ಕಾಲ್ ಕಟ್ ಮಾಡಬೇಡಿ ಎಂದು ಹೇಳಿದ್ದಾರೆ.
For More Updates Join our WhatsApp Group :




