ಬೆಂಗಳೂರು: ದರೋಡೆಕೋರನೋರ್ವ ಮಹಿಳಾ ಅಧಿಕಾರಿ ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿ ಲೈಂಗಿಕ ದೌರ್ಜನ್ಯವೆಸಗಿ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿರುವಂತಹ ಘಟನೆ ಆಗಸ್ಟ್ 11ರಂದು ಜುಡಿಷಿಯಲ್ ಲೇಔಟ್ನ ಲೇಡಿಸ್ ಪಿಜಿಯೊಂದರಲ್ಲಿ ನಡೆದಿದೆ. ಸದ್ಯ ಘಟನೆ ಸಂಬಂಧ ಯಲಹಂಕ ಠಾಣೆಗೆ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ನಡೆದಿದ್ದೇನು?
ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ಮಹಿಳೆ ಜುಡಿಷಿಯಲ್ ಲೇಔಟ್ನ ಶಿವಾಸ್ ಲೇಡಿಸ್ ಪಿಜಿಗೆ 15 ದಿನಗಳ ಹಿಂದಷ್ಟೇ ಸೇರಿಕೊಂಡಿದ್ದರು. ಆಗಸ್ಟ್ 11ರಂದು ಮಧ್ಯಾಹ್ನ ಕೆಲಸ ಮುಗಿಸಿ ಪಿಜಿಯಲ್ಲಿನ 3ನೇ ಮಹಡಿಯಲ್ಲಿರುವ ತನ್ನ ರೂಮಿಗೆ ಬಂದಿದ್ದಾರೆ.
ಈ ವೇಳೆ ಚಾಕು ಸಮೇತ ಏಕಾಏಕಿ ಬಂದ ಖದೀಮ, ಮಹಿಳೆಯ ರೂಮ್ ಡೋರ್ ಬಡೆದಿದ್ದಾನೆ. ಪಿಜಿಯವರು ಇರಬಹುದೆಂದು ಮಹಿಳೆ ಡೋರ್ ಓಪನ್ ಮಾಡಿದ್ದಾರೆ. ಕೂಡಲೇ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದ ಖದೀಮ, ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾನೆ.
ಬಳಿಕ ಬೆಡ್ ಮೇಲಿದ್ದ 2 ಮೊಬೈಲ್ಗಳು ತೆಗೆದುಕೊಂಡು ಪರಾರಿ ಆಗಿದ್ದಾನೆ. ಹಾಡಹಗಲೇ ಲೇಡಿಸ್ ಪಿಜಿಯಲ್ಲಿ ದರೋಡೆಕೋರ ಕೃತ್ಯ ಎಸಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಪಿಜಿ ಮಾಲೀಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಇನ್ನು ಇತ್ತೀಚೆಗೆ ನಗರದಲ್ಲಿ ಪಿಜಿ ಮಾಲೀಕನಿಂದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವಂತಹ ಘಟನೆ ನಡೆದಿತ್ತು. ಸೋಲದೇವನಹಳ್ಳಿಯಲ್ಲಿರುವ ಲೇಡಿಸ್ ಪಿಜಿಗೆ ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿನಿ ಸೇರಿಕೊಂಡಿದ್ದರು.
ಪಿಜಿ ಮಾಲೀಕ ಅಶ್ರಫ್ ಶನಿವಾರ ತಡರಾತ್ರಿ ಕಾರಿನಲ್ಲಿ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರವೆಸಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಅಶ್ರಫ್ನನ್ನು ಬಂಧಿಸಿದ್ದಾರೆ.
For More Updates Join our WhatsApp Group :
