ಆನೇಕಲ್: ಮದುವೆ ಎನ್ನುವುದು ಜೀವನದ ಮಹತ್ವದ ಘಟ್ಟ. “ಏಳೇಳು ಜನ್ಮ ಒಟ್ಟಾಗಿ”ಎಂಬ ಪ್ರತಿಜ್ಞೆ ಮಾಡುವ ದಾಂಪತ್ಯದಲ್ಲಿ ಎಲ್ಲರೂ ಸುಖ-ದುಃಖ ಹಂಚಿಕೊಳ್ಳುತ್ತಾರೆ ಎಂಬುದು ಸಾಮಾನ್ಯ ಕಲ್ಪನೆ. ಆದರೆ ವಾಸ್ತವದಲ್ಲಿ ಎಲ್ಲರ ಜೀವನ ಹೀಗೆ ಸಾಗುವುದಿಲ್ಲ.ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ಮೂವರು ಮಕ್ಕಳ ತಾಯಿ ತನ್ನ ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟು ಓಡಿಹೋದ ಘಟನೆ ನಡೆದಿದೆ.
ಘಟನೆ ವಿವರ: ಗಂಡನೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದ ಮಹಿಳೆ, ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಗಂಡ ಮತ್ತು ಮೂವರು ಮಕ್ಕಳನ್ನು ಬಿಟ್ಟು ಅವಳು ಮನೆಯನ್ನೇ ತೊರೆದಿದ್ದಾಳೆ.“ನನಗೆ ಗಂಡ, ಮಕ್ಕಳು ಬೇಡ… ಪ್ರಿಯಕರನೇ ಬೇಕು” ಎಂಬ ಕಾರಣದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಗೋಳಾಡಿದ ಪತಿ: ಅಕಸ್ಮಾತ್ ಪತ್ನಿ ಮನೆಯಿಂದ ಹೊರಟಿರುವುದು ಗಂಡನಿಗೆ ಭಾರೀ ಆಘಾತ ತಂದಿದ್ದು, ಆತ ಕಣ್ಣೀರು ಹಾಕಿಕೊಂಡಿದ್ದಾನೆ. ಸ್ಥಳೀಯವಾಗಿ ಈ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
For More Updates Join our WhatsApp Group