ಬೆಂಗಳೂರು ಟ್ರಾಫಿಕ್‌ಗೆ ಹೊಸ ಪರಿಹಾರ ಪ್ರಯೋಗ.

ಬೆಂಗಳೂರು ಟ್ರಾಫಿಕ್‌ಗೆ ಹೊಸ ಪರಿಹಾರ ಪ್ರಯೋಗ.

ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ.

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್​ ಇಲ್ಲಿ ಜನರಿಗೆ ಶಾಪವಾಗಿದೆ. ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರು ಹೇಳುವುದು ಟ್ರಾಫಿಕ್​​​​​​​​ ನಿರ್ವಹಣೆ ಬಗ್ಗೆ. ದಿನಕ್ಕೊಂದು ಬೆಂಗಳೂರು ಟ್ರಾಫಿಕ್​​ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ಗಳು ವೈರಲ್​​ ಆಗುತ್ತ ಇರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಮಕ್ಕಳು ಕೂಡ ಒಳಗಾಗುತ್ತಿದ್ದಾರೆ, ಇದೀಗ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ವೈಯಕ್ತಿಕ ಸಮಸ್ಯೆಗಳನ್ನು ಪರಿಹಾರ ಮಾಡಲು, ಹೊಸ ಯೋಜನೆಯನ್ನು ಶಾಲೆಯೊಂದು ಹಾಕಿಕೊಂಡಿದೆ. ಸರ್ಜಾಪುರ ರಸ್ತೆಯಲ್ಲಿರುವ ಇಂಡಸ್ ಇಂಟರ್ನ್ಯಾಷನಲ್ ಶಾಲೆಯು ಒಂದು ಆಸಕ್ತಿದಾಯಕ ಆಲೋಚನೆಯೊಂದನ್ನು ಮಾಡಿದೆ. ಈ ಬಗ್ಗೆ ಟೈಮ್ಸ್​​​​ ಆಫ್ ಇಂಡಿಯಾ ವರದಿಯನ್ನು ಮಾಡಿದೆ. ಬೆಂಗಳೂರಿನ ದೂರದ ನಗರಗಳಿಗೆ ಸಂಚಾರಿಸುವ ಎರಡು ಶಾಲಾ ಬಸ್​ಗಳಿಗೆ ಬಯೋಟಾಯ್ಲೆಟ್‌ ಅಳವಡಿಸಿದೆ. ಶಾಲೆ ಮತ್ತು ಮನೆಗೆ ಪ್ರಯಾಣಿಸುವಾಗ ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳು ದೀರ್ಘ ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಕಳೆಯುವುದರಿಂದ ಈ ಯೋಜನೆಗಳನ್ನು ತರಲಾಗಿದೆ.

ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ಸ್, ಬೆಂಗಳೂರಿನ ಒಳಗೆ ಇರುವ ದೂರದ ನಗರಗಳಿಗೆ ಅಥವಾ ಊರುಗಳಿಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ.  ಶಾಲೆಯಿಂದ ರಾಜಾಜಿನಗರ ಮತ್ತು ಯಶವಂತಪುರಕ್ಕೆ ಎರಡು ಗಂಟೆಗಳ ಕಾಲ ಪ್ರಯಾಣವನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಈ ಸೌಲಭ್ಯಗಳನ್ನು ಮಾಡಲಾಗಿದೆ. ಇಂಡಸ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ (ಆಡಳಿತ) ವಿನೋತ್ ಕುಮಾರ್, ದೂರದ ಪ್ರಯಾಣ ಮಾಡುವಾಗ ವಿದ್ಯಾರ್ಥಿಗಳಿಗೆ ಇದು ಅಗತ್ಯವಾಗಿದೆ. ಅನೇಕ ವಿದ್ಯಾರ್ಥಿಗಳು ದೀರ್ಘಕಾಲದವರೆಗೆ ಬಸ್‌ನಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ ಶೌಚಾಲಯ ಇಲ್ಲದಿದ್ದರೆ ಅಸ್ವಸ್ಥತೆ, ಆತಂಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಈ ಸಮಸ್ಯೆ ಹೊಗಲಾಡಿಸಲು ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯವನ್ನು ಅಳವಡಿಸಲಾಗಿದೆ.

ಬಯೋಟಾಯ್ಲೆಟ್ ಬೆಲೆ ಎಷ್ಟು?

ಈ ಶಾಲೆಯೂ ಹೊಸ ಸೌಲಭ್ಯಕ್ಕಾಗಿ ಎರಡು ಬಸ್‌ಗೆ ಸುಮಾರು 5 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಇದಲ್ಲದೆ, ಇದು ಪ್ರಯೋಗ ಯಶಸ್ವಿಯಾದರೆ ಇತರ ಬಸ್‌ಗಳಿಗೂ ಈ ಸೌಲಭ್ಯವನ್ನು ತರುವ ಪ್ಲಾನ್​​ ಇದೆ ಎಂದು ಹೇಳಲಾಗಿದೆ. ಈ ಸೌಲಭ್ಯಗಳು ಭಾರತೀಯ ರೈಲ್ವೆಯಲ್ಲಿ ಮಾತ್ರ ಇದೆ. ಇದೀಗ ಇಂತಹ ಸೌಲಭ್ಯಗಳನ್ನು ಶಾಲೆ ಬಸ್​​​​​​​​ಗಳಲ್ಲಿ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಇನ್ನು ಈ ಪ್ರಯತ್ನಕ್ಕೆ ಮಕ್ಕಳ ಪೋಷಕರು ಕೂಡ ಶ್ಲಾಘಿಸಿದ್ದಾರೆ. ಇದೊಂದು ಒಳ್ಳೆಯ ಚಿಂತನೆ ಎಂದು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *