ಮದುವೆಯಾಗಿ ವರ್ಷ ತುಂಬುದರೊಳಗೆ ನವ ವಿವಾಹಿತೆ ಆತ್ಮ ಹತ್ಯೆ

ಮದುವೆಯಾಗಿ ವರ್ಷ ತುಂಬುದರೊಳಗೆ ನವ ವಿವಾಹಿತೆ ಆತ್ಮ ಹತ್ಯೆ

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮ ಹತ್ಯೆಗಳು. ಅದರಲ್ಲೂ ನವ ಜೋಡಿಗಳಲ್ಲಿ ನಡೆಯುತ್ತಿರುವ ಕಲಹಗಳು ಆತ್ಮಹತ್ಯೆಗೆ ಕಾರಣ ಎಂಬು ಕೆಲ ಸಮೀಕ್ಷೆಗಳಿಂದ ತಿಳಿದು ಬಂದಿರುವ ಮಾಹಿತಿ.

ತವರು ಮನೆಗೆ ಬಂದು ನವವಿವಾಹಿತೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ಗೃಹಿಣಿಯ ಪೋಷಕರು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅತ್ತೆ-ಮಾವ, ಗಂಡ, ಮೈದುನನಿಂದ ವರದಕ್ಷಿಣೆ ಕಿರುಕುಳವಾಗಿದೆ ಎಂದು ಆರೋಪಿಸಿ ನವವಿಆಹಿತೆಯ ತವರು ಮನೆಯವರು ಆರೋಪಿಸಿದ್ದಾರೆ.  ಬಿಂದುಶ್ರೀ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಚಿಂತಾಮಣಿ ಯ ಗಾಧಿನಗರದಲ್ಲಿ ವಾಸಿಸುತಿದ್ದ ಟೈಲರ್ ಕೆ.ಬಿ ದೇವರಾಜು ಅವರ ಒಬ್ಬಳೇ ಮಗಳಾಗಿದ್ದಳು. ೨೦೨೪ ಫೆ.೨೧ ರಂದು ಆವಲಹಳ್ಳಿ ಸಮೀಪದ ಹಿರಂಡಹಳ್ಳಿ ಗ್ರಾಮದ ಮುನಿರಾಜು ಅವರ ಪುತ್ರನ ಜೊತೆಗರ ವಿವಾಹವಾಗಿತ್ತು. ಮೃತಪಟ್ಟ ಯುವತಿಯ ಕುಟುಂಬಸ್ಥರು ನನ್ನ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *