ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಕಳೆದ ಒಂದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಮನೆಯೊಳಗೆ ನೀರು ತುಂಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೋಲ್ಕತ್ತಾ ಪ್ರವಾಹ ಪೀಡಿತ ಪ್ರದೇಶಗಳ ವಿಡಿಯೋಗಳು ವೈರಲ್ ಆಗುತ್ತಿದೆ. ಹಾವೊಂದು ಬಾಯಲ್ಲಿ ಮೀನನ್ನು ಹಿಡಿದು ಈಜುತ್ತಿರುವ ದೃಶ್ಯವು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅತ್ರೇಯಿ ಮಿಶ್ರ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ದುರ್ಗಾ ಪೂಜೆಗೂ ಮುನ್ನ ಕೋಲ್ಕತ್ತಾ ಹಾಗೂ ಅದರ ಸಣ್ಣ ಸವಲತ್ತುಗಳು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಹಾವೊಂದು ಬಾಯಲ್ಲಿ ಮೀನು ಹಿಡಿದುಕೊಂಡು ಈಜುತ್ತಿರುವ ದೃಶ್ಯವನ್ನು ಕಾಣಬಹುದು.
ಈ ವಿಡಿಯೋ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಇದು ಕೋಲ್ಕತ್ತಾ, ಇಲ್ಲಿ ಎಲ್ಲವೂ ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಕೋಲ್ಕತ್ತಾದಲ್ಲಿ ಹಾವುಗಳು ಅನ್ನ ಹಾಗೂ ಮೀನು ತಿನ್ನುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂದು ಹಾವಿಗೆ ಭರ್ಜರಿ ಭೋಜನ ಎಂದು ತಮಾಷೆಯಾಗಿ ಕಾಮೆಂಟ್ ನಲ್ಲಿ ಬರೆದಿದ್ದಾರೆ.
For More Updates Join our WhatsApp Group :
