ಗಣರಾಜ್ಯೋತ್ಸವದ ದಿನ ಎಡವಟ್ಟು.

ಗಣರಾಜ್ಯೋತ್ಸವದ ದಿನ ಎಡವಟ್ಟು.

ಸ್ವಾಗತ ಫಲಕಗಳಲ್ಲಿ ಜಿಬಿಎ ಬದಲು ಬಿಬಿಎಂಪಿ ಹೆಸರು.

ಬೆಂಗಳೂರು: ಗಣರಾಜ್ಯೋತ್ಸವ ಸಂಭ್ರಮದ ಸಂದರ್ಭದಲ್ಲಿ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದೊಡ್ಡ ಪ್ರಮಾದ ಎಸಗಿದೆ. 77ನೇ ಗಣರಾಜ್ಯೋತ್ಸವ ಸ್ವಾಗತ ಫಲಕಗಳಲ್ಲಿ ಜಿಬಿಎ ಬದಲಿಗೆ ಹಳೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಸರನ್ನೇ ಅಳವಡಿಸಲಾಗಿದೆ. ಜಿಬಿಎ ರಚನೆಯಾಗಿ ಸಾಕಷ್ಟು ಸಮಯ ಕಳೆದಿದ್ದರೂ, ರಾಜ್ಯ ಮಟ್ಟದ ಮಹತ್ವದ ಕಾರ್ಯಕ್ರಮದಲ್ಲಿ ಈ ರೀತಿಯ ಎಡವಟ್ಟು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂಬ ಅಭಿಪ್ರಾಯ ಸಾರ್ವನಿಕ ವಲಯದಲ್ಲಿ ಕೇಳಿಬಂದಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೂ ಸ್ವಾಗತ ಬೋರ್ಡ್‌ಗಳಲ್ಲಿ ಜಿಬಿಎ ಬದಲು ಬಿಬಿಎಂಪಿ ಎಂದು ಬರೆಯಲಾಗಿದೆ..

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *