ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಆರೋಪಕ್ಕೆ ಹರಿದಿದ್ದು ನೆತ್ತರು.
ತುಮಕೂರು: ಕೌಟುಂಬಿಕ ಕಲಹಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ. ಅಣ್ಣನಿಂದಲೇ ತಮ್ಮ ಭೀಕರವಾಗಿ ಕೊಲೆಯಾಗಿದ್ದರೆ, ತಂದೆಯೂ ಕೃತ್ಯಕ್ಕೆ ಸಾಥ್ ಕೊಟ್ಟಿದ್ದ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಸ್ಟಾಲಿನ್ (29) ಮೃತ ಯುವಕನಾಗಿದ್ದು, ಆತನ ಸಹೋದರ ನವೀನ್ ಮತ್ತು ತಂದೆ ಜಾನ್ ಪಾಲ್ ಎಂಬುವವರೇ ಆರೋಪಿಗಳಾಗಿದ್ದಾರೆ. ಮೃತ ನವೀನ್ಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಆತ ಜೊತೆಯಾಗಿ ಬಾಳಬೇಕಿದ್ದ ಯುವತಿ ಆಡಿದ್ದ ಒಂದು ಮಾತೇ ಸ್ಟಾಲಿನ್ ಕುಟುಂಬದಲ್ಲಿ ಬೆಂಕಿಯ ಕಿಡಿ ಹೊತ್ತಿಸಿತ್ತು ಎನ್ನಲಾಗಿದೆ. ಇದೇ ತಿಂಗಳ 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಿರಿಯ ಮಗನ ಕೊಲೆ ಮಾಡಿದ್ದ ನವೀನ್ಗೆ ತಂದೆ ಜಾನ್ ಪಾಲ್ ಕೂಡ ಬೆಂಬಲ ನೀಡಿದ್ದು, ಆರೋಪಿಗಳು ಘಟನೆ ಬಗ್ಗೆ ಕಥೆ ಕಟ್ಟಿದ್ದರು. ಬೈಕ್ ನಿಲ್ಲಿಸುವಾಗ ಕುಸಿದು ಬಿದ್ದು ಕಂಬಿ ತಾಗಿ ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿ ಸ್ಟಾಲಿನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಸ್ಟಾಲಿನ್ ಮೃತಪಟ್ಟಿದ್ದಾರೆ. ಮೃತದೇಹ ಕುಟುಂಬಕ್ಕೆ ನೀಡುವ ಮುನ್ನ ಜಯನಗರ ಪೊಲೀಸರಿಗೆ ಆಸ್ಪತ್ರೆ ಮಾಹಿತಿ ಹಿನ್ನೆಲೆ ಪರಿಶೀಲಿಸಿದಾಗ ಚಾಕುವಿನಿಂದ ಇರಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ತಂದೆ ಜಾನ್ ಪಾಲ್ನ ಪೊಲೀಸರು ವಿಚಾರಣೆ ನಡೆಸಿದ್ದು, ಈತ ಆರಂಭದಲ್ಲಿ ಕತೆ ಹೇಳಿದ್ದ. ಆದರೆ ಬಳಿಕ ಅಸಲಿ ಸತ್ಯವನ್ನು ಬಿಚ್ಚಿಟ್ಟ ಹಿನ್ನೆಲೆ ಕೊಲೆ ರಹಸ್ಯ ಬಯಲಾಗಿದೆ.
For More Updates Join our WhatsApp Group :




