ದೇವರಿಗೆ ಕೈಮುಗಿದು ಹುಂಡಿ ಕದ್ದ ಕಳ್ಳ!

ದೇವರಿಗೆ ಕೈಮುಗಿದು ಹುಂಡಿ ಕದ್ದ ಕಳ್ಳ!

ಚಾಮರಾಜನಗರದಲ್ಲಿ ವಿಚಿತ್ರ ಘಟನೆ – ಕುಂಕುಮ ಹಚ್ಚಿಕೊಂಡು ಕಳ್ಳತನ.

ಚಾಮರಾಜನಗರ : ಕಳ್ಳ-ಕಾಕರಿಗೆ ಸಾಮಾನ್ಯವಾಗಿ ಯಾವುದರ ಮೇಲೂ ಭಯ ಇರೋದಿಲ್ಲ. ಆದರೆ  ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ದೇವಸ್ಥಾನದ ಹುಂಡಿ ಕದಿಯಲು ಬಂದ ಖದೀಮನೋರ್ವ, ಕನ್ನ ಹಾಕುವ ಮೊದಲು ದೇವರಿಗೆ ಕೈ ಮುಗಿದು ಕುಂಕುಮವನ್ನೂ ಹಚ್ಚಿಕೊಂಡಿದ್ದಾನೆ.

 ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಈ ಹಿಂದೆಯೂ ಹುಂಡಿ ಹಣ ಕಳುವಾಗಿದ್ದ ಕಾರಣಕ್ಕೆ ದೇಗುಲಕ್ಕೆ ಸಿಸಿಟಿವಿ ಕ್ಯಾಮರಾ ಹಾಕಲಾಗಿತ್ತು. ಈ ಹಿನ್ನೆಲೆ ಕಳ್ಳತನದ ದೃಶ್ಯ ಸೆರೆಯಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಬೊಮ್ಮಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *