ಬೆಂಗಳೂರು: ರಾಜಾರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಮತ್ತು ಕಾಂಗ್ರೆಸ್ ನಾಯಕಿ ಕುಸುಮ ಹನುಮಂತರಾಯಪ್ಪ ನಡುವಿನ ರಾಜಕೀಯ ವೈರತ್ವ ಎಲ್ಲರಿಗೂ ಗೊತ್ತಿರುವಂಥದ್ದೇ.
ನಿನ್ನೆ ತಮ್ಮ ಕ್ಷೇತ್ರದ ಒಂದು ಭಾಗದಲ್ಲಿ ನಡೆದ ಗಣೇಶ ಉತ್ಸವದಲ್ಲಿ ಭಾಗಿಯಾಗಿದ್ದ ಮುನಿರತ್ನ, ಈಗಾಗಲೇ ತಮ್ಮಿಂದ ಸೋತಿರುವ ಕುಸುಮ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಅದನ್ನು ಬಿಡಿಸಬಹುದು, ಆದರೆ ಎಂಎಲ್ಎ ಆಗುವ ಹುಚ್ಚು ಹಿಡಿದರೆ ಬಿಡಿಸಲಾಗಲ್ಲ ಎಂದು ಮುನಿರತ್ನ ಹೇಳಿದರು. ನಂತರ ಅವರು, ಯಾರ ಹಣೇಲಿ ಏನು ಬರೆದಿದೆಯೋ ಗೊತ್ತಿಲ್ಲ, ಭೂಮಿಗೆ ಬಂದವರೆಲ್ಲ ಒಂದಲ್ಲ ಒಂದು ದಿನ ಹೋಗಲೇಬೇಕು ಎಂದರು.
For More Updates Join our WhatsApp Group :
