ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ, ಮುಂದೇನಾಯ್ತು ನೋಡಿ.

ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ, ಮುಂದೇನಾಯ್ತು ನೋಡಿ.

 ಉತ್ತರ ಪ್ರದೇಶ : ಹಾವು  ಎಂದರೆ ಮೈಯೆಲ್ಲಾ ನಡುಗಲು ಶುರುವಾಗುತ್ತದೆ. ಹೀಗಾಗಿ ಹಾವಿಗೆ ಭಯಪಡುವವರೇ ಹೆಚ್ಚು. ಈ ವಿಷಜಂತುಗಳನ್ನು ಕಂಡಾಗ ಎಷ್ಟೇ ಗಟ್ಟಿ ಗುಂಡಿಗೆ ಆಗಿದ್ದರೂ ಒಂದು ಕ್ಷಣ ನಡುಕ ಶುರುವಾಗುತ್ತದೆ. ಇದೀಗ ಇಲ್ಲೊಬ್ಬ ಯುವಕನ ಪರಿಸ್ಥಿತಿಯು ಇದೆ ಆಗಿದೆ. ಮಲಗಿದ್ದ ಯುವಕನ ಮೈ ಮೇಲೆ ಹಾವೊಂದು ಹರಿದಾಡಿದ್ದು, ಇದರಿಂದ ಭಯಗೊಂಡ ಯುವಕನು ಹಾವಿನ ದಾಳಿಯಿಂದ ತಪ್ಪಿಸಿಕೊಳ್ಳಲು ಅದರ ತಲೆಯನ್ನು ಮೂವತ್ತು ನಿಮಿಷಗಳ ಕಾಲ ಕೈಯಲ್ಲೇ ಹಿಡಿದುಕೊಂಡಿದ್ದಾನೆ. ಆದರೆ ಆಮೇಲೆ ಆಗಿದ್ದೇ ಬೇರೆ ಅಂದ್ರೆ ನೀವು ನಂಬಲೇ ಬೇಕು. ಈ ಘಟನೆಯು ಉತ್ತರ ಪ್ರದೇಶದ ಲಲಿತಪುರದ ತಿಸ್ಗಾನಾ ಗ್ರಾಮದಲ್ಲಿ  ನಡೆದಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಯುವಕನ ಮೈ ಮೇಲೆ ಹರಿದಾಡಿದ ಹಾವು

ಮಲಗಿದ್ದ ವೇಳೆಯಲ್ಲಿ ಯುವಕನ  ಮೈ ಮೇಲೆ ಹಾವೊಂದು ಹತ್ತಿದ್ದು, ತಕ್ಷಣವೇ ಹಾವಿನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಮೂವತ್ತು ನಿಮಿಷಗಳ ಕಾಲ ಹಾವಿನ ತಲೆ ಹಿಡಿದುಕೊಂಡಿದ್ದಾನೆ. ಹಾವು ಆತನ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಆದರೆ ಬಿಗಿಯಾಗಿ ಹಾವಿನ ತಲೆ ಹಿಡಿದ ಪರಿಣಾಮ ಹಾವು ಸತ್ತು ಹೋಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆಸ್ಪತ್ರೆಗೆ ದಾಖಲಾದ ಯುವಕ

ಈ ಯುವಕನನ್ನು 32 ವರ್ಷದ ಗೋವಿಂದ ಎಂದು ಗುರುತಿಸಲಾಗಿದೆ. 30 ನಿಮಿಷಗಳ ಕಾಲ ಹಾವಿನ ತಲೆಯನ್ನು ಕೈಯಲ್ಲೇ ಹಿಡಿದುಕೊಂಡಿದ್ದ ಯುವಕನು ಭಯಭೀತನಾಗಿ ಕಿರುಚಲು ಪ್ರಾರಂಭಿಸಿದ್ದಾನೆ. ಇದರಿಂದಾಗಿ ಕುಟುಂಬದ ಸದಸ್ಯರು ಗೋವಿಂದನಿಗೆ ಹಾವು ಕಚ್ಚಿದೆ ಎಂದು ಭಾವಿಸಿದ್ದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಸಿಎಚ್‌ಸಿ ಮಾದವರಕ್ಕೆ ದಾಖಲಿಸಿದ್ದಾರೆ. ವೈದ್ಯರ ಬಳಿ ಈ ಯುವಕನು ಡಾಕ್ಟರ್, ದಯವಿಟ್ಟು ನನ್ನನ್ನು ಉಳಿಸಿ, ನನಗೆ ಹಾವು ಕಚ್ಚಿದೆ ಎಂದಿದ್ದಾನೆ. ವೈದ್ಯರ ತಂಡವು ಈ ಯುವಕನನ್ನು ಪರಿಶೀಲಿಸಿದಾಗ ಹಾವು ಅಥವಾ ಯಾವುದೇ ವಿಷಕಾರಿ ಕೀಟ ಕಚ್ಚಿಲ್ಲ ಎನ್ನುವುದು ದೃಢವಾಗಿದೆ. ಈ ಯುವಕನು ಆರೋಗ್ಯವಾಗಿದ್ದು, ಹಾವಿನ ವಿಷವು ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *