ಎಲ್ಲರಿಗೂ ಕೂಡ ಒಮ್ಮೆಯಾದ್ರೂ ತಮ್ಮ ಜೀವನದಲ್ಲಿ ಇಡೀ ಭಾರತವನ್ನು ಸುತ್ತಬೇಕು ಎನ್ನುವುದಿರುತ್ತದೆ. ಈ ಕನಸನ್ನು ನನಸು ಮಾಡಿಕೊಳ್ಳುವವರು ಕೆಲವೇ ಕೆಲವು ಮಂದಿ ಮಾತ್ರ. ಆದರೆ ಇಲ್ಲೊಬ್ಬ ಯುವಕನು ದೇಶವನ್ನು ಸುತ್ತುತ್ತಿದ್ದು, ಇವನ ಪ್ರಯಾಣಕ್ಕೆ ಜೊತೆಯಾಗಿದ್ದು ಇವನ ಪ್ರೀತಿಯ ಚಾರ್ಲಿಯಂತೆ. ಬಿಹಾರದ ಯುವಕನು ತನ್ನ ಮುದ್ದಿನ ಶ್ವಾನದೊಂದಿಗೆ ಭಾರತವನ್ನು ಸುತ್ತುತ್ತಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದು ಕೊಂಡಿದೆ.

ಟ್ರಿಪ್ ಎಂದರೆ ಯಾರಿಗೇ ತಾನೇ ಇಷ್ಟ ಹೇಳಿ, ಕೆಲವರು ಸೋಲೋ ಟ್ರಿಪ್ ಪ್ಲ್ಯಾನ್ ಮಾಡಿಕೊಂಡ್ರೆ, ಇನ್ನು ಕೆಲವರು ಫ್ಯಾಮಿಲಿ ಸ್ನೇಹಿತರ ಜೊತೆಗೆ ಸುತ್ತಾಡಲು ಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವಕನು ತನ್ನ ಪ್ರೀತಿಯ ಶ್ವಾನದೊಂದಿಗೆ ಸೈಕಲ್ನಲ್ಲಿ ಭಾರತವನ್ನು ಸುತ್ತುವ ಮೂಲಕ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾನೆ. ಈ ಬಿಹಾರದ ಯುವಕನ ಹೆಸರು ಸೋನು.ಇಲ್ಲಿಯವರೆಗೆ ಸರಿಸುಮಾರು 12,000 ಕಿಮೀಗೂ ಹೆಚ್ಚು ಸೈಕಲ್ ತುಳಿದುಕೊಂಡೇ ಸುತ್ತಾಟ ನಡೆಸಿದ್ದಾನೆ. ತನ್ನ ಚಾರ್ಲಿಯೊಂದಿಗೆ ಈತನ ಸುತ್ತಾಟದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.