ಅಡುಗೆ ಸಿಲಿಂಡರ್ ಕೊರತೆಗೆ ಆಮ್ ಆದ್ಮಿ ಪಕ್ಷ ದಿಢೀರ್ ಪ್ರತಿಭಟನೆ.

ಅಡುಗೆ ಸಿಲಿಂಡರ್ ಕೊರತೆಗೆ ಆಮ್ ಆದ್ಮಿ ಪಕ್ಷ ದಿಢೀರ್ ಪ್ರತಿಭಟನೆ.

ಪ್ರಧಾನಿ ಮೋದಿ ವಿದೇಶಾಂಗ ನೀತಿಗೆ ತೀವ್ರ ಟೀಕೆ; ಪೂರೈಕೆ ತ್ವರಿತಗೊಳಿಸಲು ಆಗ್ರಹ.

ಬೆಂಗಳೂರು: ರಾಜ್ಯವು ಸೇರಿದಂತೆ ದೇಶದೆಲ್ಲೆಡೆ ದಿಡೀರನೆ ಉದ್ಭವವಾಗಿರುವ ಅನಿಲ  ಸಿಲಿಂಡರ್ ಅಭಾವಕ್ಕೆ ಇಂದು ದೇಶದ ಜನಸಾಮಾನ್ಯ ಸಂಪೂರ್ಣ ತತ್ತರಿಸುತ್ತಿದ್ದಾನೆ. ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗಿ ಬೀದಿಗೆ ಬೀಳುವ ಪರಿಸ್ಥಿತಿಯನ್ನು ಸೃಷ್ಟಿಸಿರುವ  ಬಿಜೆಪಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯ  ವಿರುದ್ಧ ಆಮ್ ಆದ್ಮಿ ಪಕ್ಷ ಇಂದು ತೀವ್ರ ಪ್ರತಿಭಟನೆಯನ್ನು ನಡೆಸಿತು.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ  ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಪ್ರಧಾನಿ ಮೋದಿ  ಅವರ  ಅಮೆರಿಕ ಗುಲಾಮಗಿರಿ  ವಿದೇಶಾಂಗ ನೀತಿಯಿಂದಾಗಿ ದೇಶದ  ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಹಿಂದೆ ಕೊರೋನಾ ಸಂದರ್ಭದಲ್ಲಿಯೂ ಸಹ ಇದೇ ರೀತಿಯ ಅವಾಂತರಕ್ಕೆ ತಳ್ಳಿದ್ದ ಬಿಜೆಪಿ ಕೇಂದ್ರ ಸರ್ಕಾರ ಪ್ರತಿ ದಿವಸ ತಪ್ಪು ತಪ್ಪು ಹೆಜ್ಜೆಗಳನ್ನು ಇಡುತ್ತಾ  ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ. ವಿಶ್ವದಲ್ಲಿ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಹ ಭಾರತವು ತನ್ನ ಅಲಿಪ್ತ ಶೃಂಗ ವಿದೇಶಾಂಗ ನೀತಿಯನ್ನು ಮುಂದುವರಿಸಿತ್ತು. ಆದರೆ ಈಗ ಪ್ರಧಾನಿ ಮೋದಿಯವರು  ತಮ್ಮ ರಹಸ್ಯಗಳನ್ನು ಮುಚ್ಚಿಕೊಳ್ಳಲು ಅಮೆರಿಕ –  ಇಸ್ರೇಲ್ ಪರವಾದಂತಹ  ಶರಣಾಗತಿ ನೀತಿಯನ್ನು ಅನುಸರಿಸುತ್ತಿರುವುದು  ದೇಶದ ಜನ ಗಮನಿಸಬೇಕಿದೆ. ಕೂಡಲೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉದ್ಭವಿಸಿರುವ ಅಡುಗೆ ಅನಿಲ ಪೂರೈಕೆಯನ್ನು ಸರಾಗವಾಗಿ  ಮಾಡದಿದ್ದಲ್ಲಿ ಪಕ್ಷವು ಮತ್ತಷ್ಟು ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ”  ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಮಠ ,ಜಗದೀಶ್ ವಿ. ಸದಂ,ಲೋಹಿತ್ ಕುಮಾರ್ , ಉಷಾ ಮೋಹನ್, ಪುಷ್ಪ ಕೇಶವ್, ರವಿಕುಮಾರ್   ಸೇರಿದಂತೆ ಅನೇಕ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *