ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ರಾಜ್ಕುಮಾರ್ ಹಿರಾನಿ ಇಬ್ಬರೂ ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ನಿರ್ದೇಶಿಸಲು ಮುಂದಾಗಿದ್ದರು. ಆದರೆ, ಜೂನಿಯರ್ ಎನ್ಟಿಆರ್ ನಟಿಸಬೇಕಿದ್ದ ರಾಜಮೌಳಿ ಅವರ ಯೋಜನೆಯನ್ನು ಫಾಲ್ಕೆ ಕುಟುಂಬ ವಿರೋಧಿಸಿತು. ಮತ್ತೊಂದೆಡೆ, ಆಮಿರ್ ಖಾನ್‌ಗೆ ಸ್ಕ್ರಿಪ್ಟ್ “ಡ್ರೈ” ಎನಿಸಿದ್ದರಿಂದ ಹಿರಾನಿ ಅವರ ಸಿನಿಮಾ ಕೂಡ ನಿಂತಿದೆ.
ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ‘ದಾದಾಸಹೇಬ್ ಫಾಲ್ಕೆ’ ಸಿನಿಮಾನ ನಿರ್ದೇಶನ ಮಾಡುವ ಬದಲು ಅದನ್ನು ಪ್ರೆಸೆಂಟ್ ಮಾಡಲು ಮುಂದಾದರು. ಈ ಚಿತ್ರವನ್ನು ನಿತಿನ್ ಕಕ್ಕರ್ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರದಲ್ಲಿ ದಾದಾಸಾಹೇಬ್ ಫಾಲ್ಕೆ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ನಟಿಸಬೇಕಿತ್ತು. ಈಗ ಸಿನಿಮಾ ನಿಂತಿದೆ ಎಂಬ ಸುದ್ದಿಯು ಹರಿದಾಡಿದೆ. ಹೀಗಿರುವಾಗಲೇ ಹಿರಾನಿ ನಿರ್ದೇಶನ ಮಾಡಬೇಕಿದ್ದ ಚಿತ್ರವೂ ನಿಂತಿದೆಯಂತೆ.
ದಾದಾಸಾಹೇಬ್ ಫಾಲ್ಕೆ ಸಿನಿಮಾ ಮಾಡುವ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿತ್ತು ಎಂದರೂ ತಪ್ಪಾಗಲಾರದು. ನಿತಿನ್ ಅವರು ಹೇಗೆ ಈ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದರೋ ಬಾಲಿವುಡ್ ನಿರ್ದೇಶಕ ರಾಜ್ಕುಮಾರ್ ಹಿರಾನಿ ಇದೇ ವಿಷಯ ಇಟ್ಟುಕೊಂಡು ಬಯೋಪಿಕ್ ಮಾಡಲು ನಿರ್ಧರಿಸಿದ್ದರು. ಈ ಚಿತ್ರಕ್ಕೆ ಆಮಿರ್ ಖಾನ್ ಹೀರೋ. ಆದರೆ, ಈಗ ಈ ಚಿತ್ರವೂ ಈಗ ನಿಂತಿದೆಯಂತೆ.
For More Updates Join our WhatsApp Group :
