ನಟ ರಜನೀಕಾಂತ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

rajanikanth

ಹಿರಿಯ ತಮಿಳು ನಟ ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಚಿಕಿತ್ಸೆಗಾಗಿ ಸೋಮವಾರ ತಡರಾತ್ರಿ ಚೆನ್ನೈನ ಅಯರ್​ವಿಳಕ್ಕು ಪ್ರದೇಶದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

76 ವರ್ಷದ ನಟ ಸದ್ಯ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಜ್ಞಾನವೇಲ್​ ರಾಜಾ ಅವರ ವೇಟ್ಟೈಯಾನ್​ ಸಿನಿಮಾ ಅಕ್ಟೋಬರ್​ 10 ರಂದು ಬಿಡುಗಡೆಗೆ ತಯಾರಾಗಿದೆ. ಇನ್ನು ನಿರ್ದೇಶ ಲೋಕೇಶ್​ ಕನಕರಾಜ್​ ಅವರ ಕೂಲಿ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ವೇಳೆ ಹಠಾತ್​ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದೆ ಎಂದೂ ವರದಿಯಾಗಿದೆ.

ಇನ್ನೊಂದೆಡೆ ಈಗಾಗಲೇ ನಿಗದಿಯಾಗಿರುವ ಹೃದಯ ಸಂಬಂಧಿ ಪರೀಕ್ಷೆಗಾಗಿ ರಜನಿಕಾಂತ್​ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಜನಿಕಾಂತ್​ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಕಾರಣ ಹೃದ್ರೋಗ ತಜ್ಞರ ಅಪಾಯಿಂಟ್​ಮೆಂಟ್​ ಇದ್ದು, ಅಕ್ಟೋಬರ್ 1 ರಂದು (ಇಂದು) ಬೆಳಗ್ಗೆ ಪ್ರಮುಖ ಪರೀಕ್ಷೆಗೆ ಒಳಗಾಗಲಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿಸಿ ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *