ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಖ್ಯಾತ ಚಿತ್ರ ನಟರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಸರ್ವೇಸಾಮಾನ್ಯ. ಅಂತಯೇ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟ ಶಶಿಕುಮಾರ್ ಅನೇಕ ಪೋಷಕ ಪಾತ್ರಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ ಈಗ ಅವರ ಮಗ ಆದಿತ್ಯ ಅವರು ನಟನಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಇನ್ನು ಆದಿತ್ಯ ಅವರ ಹೊಸ ಚಿತ್ರಕ್ಕೆ ರಾಶಿ ಎನ್ನುವ ಟೈಟಲ್ ಇಡಲಾಗಿದೆ. ಭುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ರಾಶಿ ಸಿನಿಮಾ ನಿರ್ಮಾಣ ಆಗುತ್ತಿದ್ದು ವಿಜಯ್ ಪಾಳೇಗಾರ ನಿರ್ದೇಶನ ಮಾಡುತ್ತಿದ್ದಾರೆ ಲವ್ ಸ್ಟೋರಿ ಕಥಾಹಂದರದ ಈ ಚಿತ್ರಕ್ಕೆ ಹಲವು ಗಣ್ಯರು ಸಾಥ್ ನೀಡಿದ್ದಾರೆ ಆದಿತ್ಯ ಅವರ ಹುಟ್ಟು ಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ ಅನ್ನುವುದು ವಿಶೇಷ. ಚಿತ್ರದ ನಾಯಕಿಯಾಗಿ ಸಮೀಕ್ಷಾ ನಟಿಸುತ್ತಿದ್ದಾರೆ.
ನಟ ಶಶಿಕುಮಾರ್ ಮಗನ ಚಿತ್ರಕ್ಕೆ ಶೀರ್ಷಿಕೆ ಅನಾವರಣ.
