ಫ್ರೀಫೈರ್ ಗೇಮ್​​ಗೆ ಅಡಿಕ್ಟ್! ಅಕ್ಕನ ಮಗನನ್ನೇ ಕೊಂ*ದ ಮಾವ.

ಫ್ರೀಫೈರ್ ಗೇಮ್ಗೆ ಅಡಿಕ್ಟ್! ಅಕ್ಕನ ಮಗನನ್ನೇ ಕೊಂ*ದ ಮಾವ.

ನೆಲಮಂಗಲ : ಫ್ರೀಫೈರ್ ಗೇಮ್ ಚಟಕ್ಕೆ ಬಿದ್ದಿದ್ದ ಅಕ್ಕನ ಮಗನನ್ನು ಮಾವ ಕೊಲೆ  ಮಾಡಿರುವಂತಹ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕುಂಬಾರಹಳ್ಳಿಯ ವಿನಾಯಕ ಲೇಔಟ್​​ನಲ್ಲಿ ನಡೆದಿದೆ. 14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ. ಸದ್ಯ ಪೊಲೀಸರು ಮಾವ ನಾಗಪ್ರಸಾದ್(50) ನನ್ನು ಬಂಧಿಸಿದ್ದಾರೆ. ಮೃತ ಬಾಲಕ ನಾಗಪ್ರಸಾದ್ ಸಹೋದರಿ ಶಿಲ್ಪಾ ಮಗ. ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನಡೆದದ್ದೇನು?

ಬಾಲಕ ಅಮೋಘ ಕೀರ್ತಿ ಕಳೆದ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್​ನಲ್ಲಿ ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ವಾರದ ಹಿಂದೆ ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕನ ಕತ್ತು ಸೀಳಿ ಕೊಂದಿದ್ದಾರೆ.

ಸೋಮವಾರ ಬೆಳಗಿನ ಜಾವ 4.30ಕ್ಕೆ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ನಾಗಪ್ರಸಾದ್​, ನಂತರ ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆದರೆ ಎಲ್ಲಿಗೂ ಹೋಗಲು ಹಣವಿಲ್ಲದೆ ಮೆಜೆಸ್ಟಿಕ್​​ನಲ್ಲಿ 3 ದಿನ ಕಾಲಕಳೆದಿದ್ದಾರೆ. ನಂತರ ಸೋಲದೇವನಹಳ್ಳಿ ಠಾಣೆಗೆ ಹೋಗಿ ಶರಣಾಗಿದ್ದಾರೆ.

ಕೌಟುಂಬಿಕ ಕಲಹ: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣು

ಕೌಟುಂಬಿಕ ಕಲಹ ಹಿನ್ನಲೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹಾವೇರಿ ತಾಲೂಕಿನ ನಜೀಕ ಲಕಮಾಪುರ ಗ್ರಾಮದಲ್ಲಿ ನಡೆದಿದೆ. ಪತ್ನಿ ಲಲಿತವ್ವ(55) ಕೊಂದು ಸಿದ್ದಪ್ಪ ಡಬ್ಬಣ್ಣವರ(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ಗಂಡ ಮತ್ತು ಹೆಂಡತಿ ನಡುವೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಈ ವೇಳೆ ಪತಿ ಸಿದ್ದಪ್ಪ ಪತ್ನಿ ಲಲಿತವ್ವರ ಹತ್ಯೆ ಮಾಡಿದ್ದಾರೆ. ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *