ಬೆಂಗಳೂರು: ಬೆಂಗಳೂರು ಸುರಂಗ ರಸ್ತೆ ಯೋಜನೆ ಲಾಲ್ ಬಾಗ್ ಅಡಿಯಲ್ಲಿ ಹಾದುಹೋಗುವ ಸಂಬಂಧ ವಿರೋಧ ವ್ಯಕ್ತವಾಗಿರುವುದರ ಮಧ್ಯೆ ಇದೀಗ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದವರಿಗೂ ಸಮಸ್ಯೆ ಎದುರಾಗಲಿದೆ ಎಂಬ ವಿಚಾರ ಬಹಿರಂಗವಾಗಿದೆ. ಮಲ್ಲೇಶ್ವರಂನ ಸ್ಯಾಂಕಿ ಕೆರೆ ಕಡೆಯಲ್ಲಿ ಟನಲ್ ರೋಡ್ ಎಕ್ಸಿಟ್ ರ್ಯಾಂಪ್ ಪಥದ ಅಲೈನ್ಮೆಂಟ್ ಬದಲಾವಣೆ ಮಾಡಲಾಗುತ್ತಿದೆಯಂತೆ. ಆದರೆ ಡಿಪಿಆರ್ನಲ್ಲಿ ಸ್ಯಾಂಕಿ ಕೆರೆ ಪಕ್ಕದಲ್ಲೇ ಎಕ್ಸಿಟ್ ರ್ಯಾಂಪ್ ನಿರ್ಮಾಣ ಆಗುವ ಬಗ್ಗೆ ಮಾಹಿತಿಯೇ ಇಲ್ಲ ಎನ್ನಲಾಗಿದೆ. ಈಗ ಹೊಸದಾಗಿ ಸ್ಯಾಂಕಿ ಟ್ಯಾಂಕ್ ಪಕ್ಕದಲ್ಲೇ ಎಕ್ಸಿಟ್ ರ್ಯಾಂಪ್ ಮಾಡಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಿ.ವಿ.ರಾಮನ್ ರಸ್ತೆಯಲ್ಲಿ ಎಂಟ್ರಿ ಮತ್ತು ಎಕ್ಸಿಟ್ ರ್ಯಾಂಪ್ ಯೋಜನೆ ಕೈಬಿಟ್ಟು, ಸ್ಯಾಂಕಿ ರಸ್ತೆಯಲ್ಲಿ ಹೆಚ್ಚುವರಿಯಾಗಿ ರ್ಯಾಂಪ್ 6ಎ ಸೇರಿಸಲು ತೀರ್ಮಾನಿಸಲಾಗಿದೆ. ರ್ಯಾಂಪ್ 6 ಸರಾಸರಿ 2,450 ಕಿ.ಮೀ ಉದ್ದ ಇರಲಿದೆ. ಇದರಿಂದ ಕೆರೆಯ ಪಕ್ಕದ ಬಂಡೆ ಕೆಳಗೆ ಟನಲ್ ಕೊರೆಯಬೇಕಿರುವುದರಿದ ಕೆರೆಯ ಜಲಮೂಲಕ್ಕೆ ಹಾನಿ ಆಗಬಹುದು, ಇದರಿಂದ ಕೆರೆ ಬತ್ತಿ ಹೋಗಬಹುದು ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸ್ಥಾಪಕ ರಾಜ್ ದುಗಾರ್ ಅಭಿಪ್ರಾಯಪಟ್ಟಿದ್ದಾರೆ.
ಗಾಲ್ಫ್ ಮೈದಾನದ ಕೆಳಭಾಗದಿಂದ ನಿರ್ಗಮನ ರ್ಯಾಂಪ್ ಆರಂಭವಾಗಿ, ಸ್ಯಾಂಕಿ ರಸ್ತೆಯಲ್ಲಿ ಕೆರೆಯ ದಡದಲ್ಲಿ ಮುಕ್ತಾಯವಾಗಲಿದೆ. ಸ್ಯಾಂಕಿ ರಸ್ತೆ ಪಕ್ಕದಲ್ಲಿ ಸುರಂಗ ರಸ್ತೆ ನಿರ್ಮಿಸಿದರೆ ಕೆರೆಯ ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :
