ರೇಣುಕಾಸ್ವಾಮಿ ಸಾವಿನ ನಂತರ ಯಾರಿಗೆಲ್ಲ ದರ್ಶನ್ ಕಾಲ್ ಮಾಡಿದ್ರಂತೆ? ಹೆಚ್ಚು ಹೊತ್ತು ಮಾತನಾಡಿದ್ಯಾ ಜೊತೆ?

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾರ್ಜ್ಶೀಟ್ ಬಿಡುಗಡೆಯಾಗಿದೆ. ಪವಿತ್ರಾ ಗೌಡ (Pavithra Gowda) ರೇಣುಕಾಸ್ವಾಮಿಗೆ ತನ್ನ ಚಪ್ಪಲಿಯಿಂದ ಕಪಾಳಕ್ಕೆ ಹಾಗೂ ಮುಖಕ್ಕೆ ಹೊಡೆದಿದ್ದಾಗಿ ಚಾರ್ಜ್ ಶೀಟ್ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಇದೀg ರೇಣುಕಾಸ್ವಾಮಿ ಕೊಲೆ ಬಳಿಕ ಯಾರಿಗೆಲ್ಲ ದರ್ಶನ್ ಕಾಲ್ ಮಾಡಿದ್ರು? ಹಾಗೇ ಪವಿತ್ರಾ ಗೌಡ ಹೆಸರನ್ನು ಹೇಗೆ ಸೇವ್ ಮಾಡಿಕೊಂಡಿದ್ರು? ತಿಳಿಯಲು ಮುಂದೆ .

ಯಾವ ಆರೋಪಿ ಜತೆ ಎಷ್ಟು ಕಾಲ್ ಮಾಡಿದ್ರು ದರ್ಶನ್?

ಚಾರ್ಜ್ ಶೀಟ್ ನಲ್ಲಿ ದರ್ಶನ್ ಫೋನ್ ಕಾಲ್ ಬಗ್ಗೆ ಎಕ್ಸ್ಕ್ಲೂಸೀವ್ ಮಾಹಿತಿ ಇದೀಗ ಸಿಕ್ಕಿದೆ. ಜೂನ್ 9 ರಂದು ಪವಿತ್ರ ಗೌಡಗೆ ಮೂರು ಬಾರಿ ಚಾಟ್ ಮಾಡಿರೋದು ಜಾರ್ಜ್ಶೀಟ್ ನಲ್ಲಿ ಇದೆ. ಮಾತ್ರವಲ್ಲ ದರ್ಶನ್ ಪವಿತ್ರಗೌಡ ಹೆಸರನ್ನು Pavi, Paviiii, PavithraGowda ಎಂದು ಸೇವ್ ಕೂಡ ಮಾಡಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.

ಆರೋಪಿ ಪವನ್ಗೆ ಎರಡು ವಾಟ್ಸ್ಆಪ್ ಕರೆ ಮಾಡಿ ಡಿಲಿಟ್ ಮಾಡಿದ್ರಂತೆ ದಚ್ಚು!

ಆರೋಪಿ ಪವನ್ಗೆ ಎರಡು ಬಾರಿ ವಾಟ್ಸ್ಆಪ್ ಕರೆ ಮಾಡಿ ದರ್ಶನ್ ಕೊನೆಗೆ ಡಿಲಿಟ್ ಮಾಡಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಇದೆ .ವಿನಯ್ ಜತೆಗೂ ವಾಟ್ಸ್ಆಪ್ ಚಾಟ್ ಮಾಡಿದ್ದು, ಕೊನೆಗೆ ಡಿಲೀಟ್ ಮಾಡಿದ್ದಾರಂತೆ ದರ್ಶನ್.

ಬರೋಬ್ಬರಿ 31 ವಾಟ್ಸ್ಆಪ್ ಕರೆಗಳು, 32 ವಾಟ್ಸ್ಆಪ್ ಚಾಟ್ ಗಳು ಡಿಲೀಟ್!

ಆರೋಪಿ ನಾಗರಾಜ್ ಜತೆ ಒಟ್ಟು 31 ವಾಟ್ಸ್ಆಪ್ ಕರೆಗಳು ಮತ್ತು 32 ವಾಟ್ಸ್ ಆಫ್ ಚಾಟ್ಗಳನ್ನು ದರ್ಶನ್ ಡಿಲಿಟ್ ಮಾಡಿದ್ದಾರೆ. ಆರೋಪಿ ಲಕ್ಷ್ಮಣ್ ಜತೆಗೆ ಮೂರು ವಾಟ್ಸಪ್ ಕರೆಗಳು & ಒಂದು ವಾಟ್ಸಪ್ ಚಾಟ್ ಮಾಡಿದ್ದು ಕೂಡ ಡಿಲಿಟ್ ಮಾಡಿರುವುದಾಗಿ ಉಲ್ಲೇಖವಾಗಿದೆ. ಆರೋಪಿ ಪ್ರದೋಶ್ ಜತೆಗೆ 10 ವಾಟ್ಸಪ್ ಕರೆಗಳನ್ನು ದರ್ಶನ್ ಮಾಡಿದ್ದರು. ಕೊಲೆಯಾದ ಜೂನ್ 9 ರಿಂದ ಜೂನ್ 11 ರವರೆಗೂ ದರ್ಶನ್ ನಿರಂತರವಾಗಿ ಕಾಲ್ ಮಅಡಿರುವುದಾಗಿ ಜಾರ್ಜ್ಶಿಟ್ನಲ್ಲಿ ಇದೆ ಎನ್ನಲಾಗಿದೆ.

ಪವಿತ್ರಾ ಗೌಡ ರೇಣುಕಾಸ್ವಾಮಿಗೆ ತನ್ನ ಚಪ್ಪಲಿಯಿಂದ ಕಪಾಳಕ್ಕೆ ಹಾಗೂ ಮುಖಕ್ಕೆ ಹೊಡೆದಿದ್ದಾಗಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖ!

ದರ್ಶನ್ ಅವರೇ ಪವಿತ್ರಾ ಅವರನ್ನು ಮನೆಗೆ ಹೋಗು ಎಂದು ಕಳಿಸಿದ್ದರಂತೆ. ಪವಿತ್ರಾ ಗೌಡ ಶೆಡ್ನಿಂದ ಹೋದ ನಂತರ ಆರೋಪಿ 13 ದೀಪಕ್ ಎಂಬಾತ ಆರೋಪಿಗಳೊಂದಿಗೆ ಸೇರಿಕೊಂಡಿದ್ದ. ನಂತರ ದರ್ಶನ್ ಹಾಗೂ ಪ್ರದೋಷ್ಗೆ ಹೇಳಿ ರೇಣುಕಾಸ್ವಾಮಿ ಫೋನ್ ಚೆಕ್ ಮಾಡಲಾಗಿತ್ತು. ಪ್ರದೋಷ್ ರೇಣುಕಾಸ್ವಾಮಿ ಮೊಬೈಲ್ ನೋಡಿ ಆತ ಹಲವಾರು ಮಹಿಳೆಯರಿಗೆ ಮೆಸೇಜ್ ಮಾಡಿದ್ದಾಗಿ ಹೇಳಿದ್ದ ಎಂದು ಚಾರ್ಜ್ ಶೀಟ್ನಲ್ಲಿ ತಿಳಿಸಲಾಗಿದೆ.

ಶೂ ಕಾಲಿನಲ್ಲಿ ಒದ್ದ ದರ್ಶನ್! ರೇಣುಕಾಸ್ವಾಮಿ ಮೊಬೈಲ್ನಲ್ಲಿದ್ದ ಮೆಸೇಜ್ಗಳನ್ನು ಓದುತ್ತಾ ಕಾಮಿಷ್ಠ ಎಂದು ಆತನ ಹೊಟ್ಟೆಗೆ ಒದ್ದಿದ್ದರು ಎನ್ನಲಾಗಿದೆ. ನಟ ದರ್ಶನ್ ನೆಲದ ಮೇಲೆ ಬಿದ್ದಿದ್ದ ರೇಣುಕಾಸ್ವಾಮಿ ಎದೆ ಭಾಗವನ್ನು ಶೂ ಕಾಲಿನಿಂದ ತುಳಿದು ಜೋರಾಗಿ ಒದ್ದಿದ್ದರು ಎನ್ನಲಾಗಿದೆ. ರೇಣುಕಾಸ್ವಾಮಿಯ ಎಡ ಭಾಗದ ಕಿವಿ ಭಾಗದ ತಲೆ ಭಾಗಕ್ಕೆ ಶೂ ಕಾಲಿನಿಂದ ಜೋರಾಗಿ ಒದ್ದಿದ್ದರು ಎಂದು ಚಾರ್ಜ್ ಶೀಟ್ನಲ್ಲಿ ಬರೆಯಲಾಗಿದೆ.

Leave a Reply

Your email address will not be published. Required fields are marked *