ಅಹಮದಾಬಾದ್ || ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ

ಅಹಮದಾಬಾದ್ || ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ

ಅಹಮದಾಬಾದ್ : ಪಕ್ಷ ಸಂಘಟನೆ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಏನೆಲ್ಲ ಕಾಯತಂತ್ರಗಳನ್ನು ಮಾಡಬೇಕು. ಪಕ್ಷದಲ್ಲಿ ಯಾವೆಲ್ಲ ಬದಲಾವಣೆಗಳು ಆಗಬೇಕು ಎಂಬ ವಿಚಾರ ಸೇರಿದಂತೆ ಕೇಂದ್ರದ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟದ ರೂಪು-ರೇಷೆಗಳನ್ನು ನಿರ್ಧರಿಸುವ ಬಗ್ಗೆ ಇಲ್ಲಿ ನಡೆದಿರುವ ಎಐಸಿಸಿ ಅಧಿವೇಶನದಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.

ನ್ಯಾಯಕ್ಕೆ ದಾರಿ, ಸಂಕಲ್ಪ, ಸಮರ್ಪಣೆ, ಹೋರಾಟ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಎಐಸಿಸಿ ಸಭೆ ನಡೆದಿದ್ದು, ದೇಶದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಏನೆಲ್ಲ ತಂತ್ರಗಳನ್ನು ಹೆಣೆಯಬೇಕು ಎಂಬ ಬಗ್ಗೆಯೇ ಮಹತ್ವದ ಚರ್ಚೆಗಳು ಆಗಿವೆ

ಕಾಂಗ್ರೆಸ್ ಪಕ್ಷವನ್ನು ಹಿಂದಿನ ಗತವೈಭವಕ್ಕೆ ಮರಳಿಸಲು ಪಕ್ಷದ ಮಟ್ಟದಲ್ಲಿ ಯಾವೆಲ್ಲ ಬದಲಾವಣೆಗಳಾಗಬೇಕು, ಜಿಲ್ಲಾಧ್ಯಕ್ಷರುಗಳಿಗೆ ಹೆಚ್ಚಿನ ಅಧಿಕಾರ ನೀಡಿ ಪಕ್ಷದಲ್ಲಿ ಅವರಿಗೆ ಹೆಚ್ಚಿನ ಮಹತ್ವ ನೀಡುವ ಜತೆಗೆ ಚುನಾವಣಾ ಟಿಕೆಟ್ ಹಂಚಿಕೆಯಲ್ಲಿ ಅವರ ಪಾತ್ರವನ್ನು ನಿರ್ಧರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ.

ಗುಜರಾತ್‌ನಲ್ಲಿ ೬೪ ವರ್ಷಗಳ ನಂತರ ಕಾಂಗ್ರೆಸ್‌ನ ಎಐಸಿಸಿ ಅಧಿವೇಶನ ನಡೆದಿದ್ದು, ಎರಡು ದಿನಗಳ ಈ ಸಭೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ವಿಚಾರಗಳ ಚರ್ಚೆಗೆ ಆದ್ಯತೆ ನೀಡಲಾಗಿದ್ದು, ಇದರ ಜತೆಗೆ ಕೇಂದ್ರದ ವಿರುದ್ಧ ಹೋರಾಟದ ರೂಪು-ರೇಷೆಗಳು ನಿರ್ಧಾರವಾಗಲಿದೆ.

ಈ ಅಧಿವೇಶನದಲ್ಲಿ ರಾಜಕೀಯ ಹಾಗೂ ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದಿರುವ ಈ ಅಧಿವೇಶನದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಗಾAಧಿ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ವರಿಷ್ಠ ನಾಯಕರು ಭಾಗಿಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವ ಕೆ.ಜೆ.

ಜಾರ್ಜ್,ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸೇರಿದಂತೆ ಹಲವು ನಾಯಕರು ಎಐಸಿಸಿ ಅಧಿವೇಶನದಲ್ಲಿ ಭಾಗಿಯಾಗಿದ್ದು, ಸುಮಾರು ೨,೫೦೦ ಸದಸ್ಯರು ಸಭೆಯಲ್ಲಿ ಭಾಗಿಯಾಗಿ ಸಂಘಟನೆ ಬಲಪಡಿಸುವ ಮಂತ್ರ ಜಪಿಸಿದ್ದಾರೆ.

ಪ್ರಿಯಾಂಕಗಾAಧಿಗೆ ಹೊಸ ಜವಾಬ್ದಾರಿ

ಮುಂದಿನ ದಿನಗಳಲ್ಲಿ ಹಲವು ದೊಡ್ಡ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಗಾAಧಿಯವರಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ಆಗಲಿವೆ ಎಂದು ಹೇಳಲಾಗಿದೆ.

ಜಾತಿ ಗಣತಿಗೆ ಸಂಬAಧಿಸಿದAತೆ ರಾಹುಲ್ ಅವರ ಅಭಿಪ್ರಾಯ, ವಕ್ಫ್ಕಾಯ್ದೆಗೆ ವಿರೋಧ, ಮತದಾರರ ಪಟ್ಟಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚೆಗಳು ಆಗಲಿವೆ ಎಂದು ಹೇಳಲಾಗಿವೆ.

ಹೋರಾಟದ ರೂಪು-ರೇಷೆ

ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಮಾತನಾಡಿ ಸಮಾಜದ ಪ್ರತಿಯೊಂದು ವರ್ಗ, ಕೇಂದ್ರ ಸರ್ಕಾರದ ನೀತಿಗಳಿಂದ ಬಳುತ್ತಿದೆ. ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿರುವಾಗ, ಜನರು ಕಾಂಗ್ರೆಸ್ ಅನ್ನು ಭರವಸೆಯಿಂದ ನೋಡುತ್ತಿದ್ದಾರೆ. ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ, ರಾಷ್ಟ್ರವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯ” ಈ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪು ರೇಷೆ ಸಿದ್ದ ಪಡಿಸಲಾಗುತ್ತಿದೆ ಎಂದಿದ್ಧಾರೆ.

ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಮಿತ್ ಚಾವ್ಡಾ ಮಾತನಾಡಿ ಎಐಸಿಸಿ ಅಧಿವೇಶನ ಗುಜರಾತ್ ಮತ್ತು ರಾಷ್ಟ್ರದ ಜನರ ಮೇಲೆ ಪರಿಣಾಮ ಬೀರುವ ಹಲವಾರು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಅಧಿವೇಶನದಲ್ಲಿ ಅಪೌಷ್ಟಿಕತೆ, ಹೆಚ್ಚುತ್ತಿರುವ ಶಿಕ್ಷಣ ವೆಚ್ಚಗಳು, ಒಪ್ಪಂದದ ಉದ್ಯೋಗ, ನೆಲಸಮದಿಂದಾಗಿ ಸ್ಥಳಾಂತರ, ಹಣದುಬ್ಬರ ಮತ್ತು ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ

ರಾಜ್ಯ ಘಟಕದ ಮುಖ್ಯಸ್ಥ ಶಕ್ತಿಸಿನ್ಹ ಗೋಹಿಲ್ ಮಾತನಾಡಿ ಇಂದು ಸಂಜೆ ಸಿಡಬ್ಲ್ಯೂಸಿ ಸಭೆಗಾಗಿ ಪಟೇಲ್ ಸ್ಮಾರಕದ ಆವರಣದಲ್ಲಿ ಮತ್ತೊಂದು ವೇದಿಕೆ ನಿರ್ಮಿಸಲಾಗಿದೆ.ನಾಳೆ ಎಐಸಿಸಿ ಅಧಿವೇಶನಕ್ಕಾಗಿ ಸಬರಮತಿ ನದಿ ದಂಡೆಯಲ್ಲಿ ದೊಡ್ಡ ಗುಮ್ಮಟ ನಿರ್ಮಿಸಲಾಗಿದೆ ೬೪ ವರ್ಷಗಳ ನಂತರ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ ನಡೆಯುತ್ತಿದೆ ದೇಶಾದ್ಯಂತ ಸುಮಾರು ೩,೦೦೦ ಪ್ರತಿನಿಧಿಗಳು ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ ಎಂದಿದ್ದಾರೆ

೧೯೯೮ ರಿಂದ ಅಧಿಕಾರದಿಂದ ಹೊರಗುಳಿದಿರುವ ಗುಜರಾತ್ ರಾಜ್ಯದೊಂದಿಗಿನ ತನ್ನ ಬಲವಾದ ಸಂಬAಧದ ಬಗ್ಗೆ ಕಾಂಗ್ರೆಸ್ ದೀರ್ಘವಾಗಿ ಚರ್ಚಿಸಲು ಸಜ್ಜಾಗಿದೆ ಮತ್ತು ರಾಜ್ಯದೊಂದಿಗಿನ ಪಕ್ಷದ ಐತಿಹಾಸಿಕ ಸಂಬAಧವನ್ನು ಪ್ರದರ್ಶಿಸಲು ಒಂದು ನಿರ್ಣಯ ಅಂಗೀಕಾರ ಮಾಡಲು ಕಾಂಗ್ರೆಸ್ ಮುಂದಾಗಿದೆ

ಸರ್ದಾರ ವಲ್ಲಭಬಾಯ್ ಪಟೇಲ್ ಅವರ ೧೫೦ ನೇ ಜನ್ಮ ದಿನಾಚರಣೆ ಮತ್ತು ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಅಧ್ಯಕ್ಷತೆಯ ೧೦೦ ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಎಐಸಿಸಿ ಸಭೆ ನಡೆಸಲಾಗುತ್ತಿದೆ

Leave a Reply

Your email address will not be published. Required fields are marked *