ವಾಷಿಂಗ್ಟನ್: ಡೆಸ್ಕ್ಟಾಪ್ ಕ್ರೋಮ್ ಬಳಕೆದಾರರಿಗೆ ಹೊಸ ಎಐ ಚಾಲಿತ ಗೂಗಲ್ ಲೆನ್ಸ್ ವೈಶಿಷ್ಟ್ಯವನ್ನು ತರಲು ಗೂಗಲ್ ಸಜ್ಜಾಗಿದೆ. ನೇರವಾಗಿ ಸರ್ಚ್ ಬಾರ್ನಲ್ಲಿಯೇ ಈ ಗೂಗಲ್ ಲೆನ್ಸ್ ಅನ್ನು ಬಳಕೆದಾರರು ಪಡೆಯಬಹುದಾಗಿದೆ. ಇಮೇಜ್ ಮತ್ತು ಟೆಕ್ಸ್ಟ್ ಎರಡನ್ನೂ ಬಳಕೆ ಮಾಡಿಕೊಂಡು ಸುಗಮ ಮತ್ತು ಪರಿಣಾಮಕಾರಿಯಾಗಿ ಈ ಸೇವೆ ಪಡೆಯಬಹುದಾಗಿದೆ ಎಂದು ಗೂಗಲ್ ತಿಳಿಸಿದೆ.
ಈ ಕುರಿತು ಮಾತನಾಡಿರುವ ಕ್ರೋಮ್ನ ಉಪಾಧ್ಯಕ್ಷ ಪರಿಸ ಟಬ್ರಿಜ್, ಈ ಹೊಸ ಫೀಚರ್ ಅನ್ನು ಬಳಕೆದಾರರು, ಸರ್ಚ್ ಬಾಕ್ಸ್ನಲ್ಲಿಯೇ ಗೂಗಲ್ ಲೆನ್ಸ್ ಐಕಾನ್ ಕ್ಲಿಕ್ ಮಾಡುವ ಮೂಲಕ ಪಡೆಯಬಹುದು. ಪ್ರಸ್ತುತ ಟ್ಯಾಬ್ಗಳಲ್ಲಿನ ಸೈಡ್ ಬಾರ್ನಲ್ಲಿ ಇದನ್ನು ಸಕ್ರಿಯಗೊಳಿಸಬೇಕು. ಇದರಿಂದ ಬಳಕೆದಾರರು ಗೂಗಲ್ ಲೆನ್ಸ್ ಮೂಲಕ ಟೈಕ್ಸ್ಟ್ ಜೊತೆಗೆ ಇಮೇಜ್ ಫೀಚರ್ ಮೂಲಕ ಮಲ್ಟಿ ಸರ್ಚ್ ಹುಡುಕಾಟವನ್ನು ನಡೆಸಬಹುದು. ಹುಡುಕಾಟದ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದು, ಈ ಹಿಂದೆ ಇದ್ದ ಹೊಸ ಟ್ಯಾಬ್ಗಳ ಮೂಲಕ ಹುಡುಕಾಡುವ ಯತ್ನವನ್ನು ತೆಗೆದುಹಾಕಲಾಗುವುದು ಎಂದರು.
ಈ ಹಿಂದೆ ಗೂಗಲ್ ಲೆನ್ಸ್ ಅನ್ನು ರೈಟ್ ಕ್ಲಿಕ್ ಅಥವಾ ಕ್ರೋಮ್ನಲ್ಲಿರುವ ಮೂರು ಚುಕ್ಕಿಗಳ ಮೆನು ಜೊತೆಗೆ ಸೈಡ್ಬಾರ್ಗಳ ಮೂಲಕ ಸಕ್ರಿಯಗೊಳಿಸಬೇಕಿತ್ತು. ಆದರೆ, ಇದೀಗ ಹೊಸ ಅಭಿವೃದ್ಧಿಯಲ್ಲಿ ನೇರವಾಗಿ ಬ್ರೌಸಿಂಗ್ ವೇಳೆಯೇ ಸುಲಭವಾಗಿ ಇದರ ಲಭ್ಯತೆ ಪಡೆದು ಉತ್ತಮ ಪ್ರದರ್ಶನ ನಡೆಸಬಹುದಾಗಿದೆ. ಈ ಹೊಸ ಫೀಚರ್ ಶೀಘ್ರದಲ್ಲೇ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಗೂಗಲ್ ವಕ್ತಾರ ಜೊಸುಹಾ ಕ್ರುಜ್, ಯುನೈಟೆಡ್ ಸ್ಟೇಟ್ನ ಬಳಕೆದಾರರು ಲೆನ್ಸ್ ಹೆಚ್ಚುವರಿ ಹುಡುಕಾಟದ ಸಂದರ್ಭದಲ್ಲಿ ಎಐ ಅಭಿವೃದ್ಧಿಯ ಲಭ್ಯತೆ ಪಡೆಯಲಿದ್ದಾರೆ. ಇದು ಅಮೆರಿಕ ಬಳಕೆದಾರರಿಗೆ ಎಕ್ಸುಕ್ಲೂಸಿವ್ ಆಗಿದೆ ಎಂದು ತಿಳಿಸಿದ್ದಾರೆ.