ಬೆಂಗಳೂರು, ಬಳ್ಳಾರಿ ಗಾಳಿಯ ಗುಣಮಟ್ಟ ಅಪಾಯದ ಹಂತ ತಲುಪಿದೆ.

ಬೆಂಗಳೂರು, ಬಳ್ಳಾರಿ ಗಾಳಿಯ ಗುಣಮಟ್ಟ ಅಪಾಯದ ಹಂತ ತಲುಪಿದೆ.

ತಜ್ಞರಿಂದ ಹೈ ಅಲರ್ಟ್, ಮಕ್ಕಳಿಗೆ–ವೃದ್ಧರಿಗೆ ಎಚ್ಚರಿಕೆ.

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತುಂಬಾ ಕಳಪೆ ಇದೆ. ನಗರದಲ್ಲಿ ಬೆಳಿಗ್ಗೆಯಿಂದ ಸಂಜೆಯವರರೆಗೆ ವಾಯು ಗುಣಮಟ್ಟ ಸೂಚ್ಯಂಕ (AQI) ಮಧ್ಯಮದಿಂದ ಕಳಪೆಯವರೆಗೆ ಇರುತ್ತದೆ. ನಗರಾದ್ಯಂತ ಗಾಳಿಮಟ್ಟದಲ್ಲಿ ಸರಾಸರಿ ವರದಿಯಾಗಿದೆ. 89 ಮತ್ತು 159 ರ ನಡುವೆ ಈ ಮಟ್ಟ ಇರಲಿದೆ ಎಂದು ಹೇಳಲಾಗಿದೆ. ಇನ್ನು ನೆನ್ನೆ 85ರಷ್ಟು ಇತ್ತು. ಇದು ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಅಪರೂಪದ ಗಾಳಿಯ ಗುಣಮಟ್ಟ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಗಾಳಿ ಮಟ್ಟ ತುಂಬಾ ಕಳಪೆ ಇತ್ತು. ಇನ್ನು ಗಾಳಿ ಮಟ್ಟ ಇಳಿಕೆಗೆ PM2.5 ಮತ್ತು PM10 ಪ್ರಮುಖ ಕಾರಣವಾಗಿದ್ದು, PM2.5 ಮಟ್ಟಗಳು ಸುಮಾರು 54 µg/m³ ಆಗಿವೆ. ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆಗಳಿರುವವರಂತಹ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಹೇಳಿದ್ದಾರೆ.

ನಗರದ ರೈಲ್ವೆ ನಿಲ್ದಾಣ, ಹೆಬ್ಬಾಳ ಮತ್ತು ಬಿಟಿಎಂ ಲೇಔಟ್ ಇತ್ತೀಚೆಗೆ 80–100 ವ್ಯಾಪ್ತಿಯಲ್ಲಿ ತಾಪಮಾನ ದಾಖಲಾಗಿದೆ. ಇದು ಕಳಪೆ ಗಾಳಿ ಗುಣಮಟ್ಟ ಹೊಂದಿರುವ (101–150+) ಪ್ರದೇಶ ಎಂದು ಹೇಳಲಾಗಿದೆ. ಬೆಳ್ಳಂದೂರು 142–151 ಗಾಳಿಯ ಮಟ್ಟವನ್ನು ಹೊಂದಿದೆ. ವೈಟ್‌ಫೀಲ್ಡ್​​​ನಲ್ಲಿ 37–144 ಗಾಳಿಯ ಗುಣಮಟ್ಟ ಇದೆ. ರೇಷ್ಮೆ ಬೋರ್ಡ್ 147 ಗಾಳಿಯ ಮಟ್ಟ ಇದೆ. ಬಿಡಬ್ಲ್ಯೂಎಸ್ಎಸ್ಬಿ ಕಡಬೇಸನಹಳ್ಳಿಯಲ್ಲಿ 153 ಇದೆ ಎಂದು ಹೇಳಿದೆ.

ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ :

ಮಂಗಳೂರಿನಲ್ಲಿ ಸಾಮಾನ್ಯ ಗಾಳಿಯ ಮಟ್ಟ ಇದ್ದು, ಇಂದು 85ಕ್ಕೆ ಬಂದಿದೆ. ಮೈಸೂರಿನಲ್ಲಿ ಗಾಳಿಯ ಮಟ್ಟ 88 ಇದೆ. ಇದು ನೆನ್ನೆಗಿಂತ ಸ್ವಲ್ಪ ಹೆಚ್ಚಿದೆ. ಸಂಜೆ ಹೊತ್ತಿಗೆ ಇದು ಬದಲಾಗಬಹುದು. ಬೆಳಗಾವಿಯಲ್ಲೂ ಕೂಡ ಗಾಳಿಯ ಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ನೆನ್ನೆಗಿಂತ ಇಂದು ಗಾಳಿಯ ಮಟ್ಟದಲ್ಲಿ ಬದಲಾವಣೆ ಆಗಿದೆ. ಇಂದು 100 ಇದೆ . ಕಲಬುರ್ಗಿಯಲ್ಲಿ ಗಾಳಿ ಮಟ್ಟ ಅಪಾಯದಲ್ಲಿದೆ. ನೆನ್ನೆ ಕೂಡ ಗಾಳಿಮಟ್ಟದಲ್ಲಿ ತುಂಬಾ ಇಳಿಕೆ ಕಂಡಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *