ರಾಜ್ಯದ ಹಲವೆಡೆ AQI ಏರಿಕೆ; ಜನರಲ್ಲಿ ಆತಂಕ.
ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಮಂಗಳೂರಿನ AQI ಇನ್ನಷ್ಟು ಹದಗೆಟ್ಟಿದೆ.
ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 156ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಮಂಗಳೂರಿನ ಏರ್ ಕ್ವಾಲಿಟಿ 190 ಆಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 168 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ
- ಬೆಂಗಳೂರು –156
- ಮಂಗಳೂರು-190
- ಮೈಸೂರು –158
- ಬೆಳಗಾವಿ – 182
- ಕಲಬುರ್ಗಿ-144
- ಶಿವಮೊಗ್ಗ – 181
- ಬಳ್ಳಾರಿ – 168
- ಹುಬ್ಬಳ್ಳಿ- 159
- ಉಡುಪಿ –181
- ವಿಜಯಪುರ –152
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
For More Updates Join our WhatsApp Group :




