ಪತಿ ಕಿರುಕುಳ ಆರೋಪಿಸಿ ಶಾಲೆ ಮುಂದೆ ಪತ್ನಿಯ ಧರಣಿ.
ರಾಮನಗರ : ಕಿರುಕುಳ ನೀಡಿದ್ದಲ್ಲದೆ ಮನೆಗೆ ಸೇರಿಸದ ಆರೋಪದ ಹಿನ್ನೆಲೆ ಪತಿ ಒಡೆತನದ ಶಿಕ್ಷಣ ಸಂಸ್ಥೆಯ ಎದುರೇ ಕುಳಿತು ಪತ್ನಿ ಪ್ರತಿಭಟನೆ ನಡೆಸಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಾಲಕ ರೂಪೇಶ್ ಜೊತೆ ಕಳೆದ ಒಂದು ವರ್ಷದ ಹಿಂದೆ ಪ್ರೀತಿ ವಿವಾಹವಾಗಿತ್ತು. ಆದರೆ ಪತಿ ಕಿರುಕುಳ ನೀಡುತ್ತಿದ್ದು, ಕೆಲ ದಿನಗಳಿಂದ ಮನೆಗೂ ತನ್ನನ್ನು ಸೇರಿಸುತ್ತಿಲ್ಲ ಎಂದು ಪ್ರೀತಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿರುವ ಇವರು, ನ್ಯಾಯಕ್ಕಾಗಿ ಪತಿಗೆ ಸೇರಿದ ಶಾಲೆಯ ಮುಂದೆ ಪ್ರತಿಭಟನೆ ಕುಳಿತಿದ್ದಾರೆ.
For More Updates Join our WhatsApp Group :




