ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾಗಿದೆಯೆಂಬ ಆರೋಪ.

ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾಗಿದೆಯೆಂಬ ಆರೋಪ.

ಧಾರವಾಡ :ಕನ್ನಡದ ಖ್ಯಾತ ಯೂಟ್ಯೂಬರ್ ಖಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಇದೀಗ ಭಾರೀ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆ ಎಂಬ ಗಂಭೀರ ಆರೋಪಗಳು ಅವರ ಮೇಲೆ ಕೇಳಿಬಂದಿದ್ದು, ಈ ಪ್ರಕರಣ ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ.

ಏನಿದು ವಿವಾದ?

ಧಾರವಾಡದ ಗಾಯತ್ರಿ ಎಂಬ ಹಿಂದೂ ಯುವತಿಯನ್ನು ಮದುವೆಯಾಗಿದ್ದು, ಅದಕ್ಕಾಗಿ ಧಾರ್ಮಿಕ ಹಾಗೂ ವ್ಯಕ್ತಿತ್ವವನ್ನು ಮರೆಮಾಚಿದ ದಾಖಲೆಗಳನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಯುವತಿಯ ಪೋಷಕರು ಮಾಡಿದ್ದಾರೆ. ತಾವು ಧಾರ್ಮಿಕವಾಗಿ ವಂಚನೆಗೊಳಗಾಗಿದ್ದೇವೆ ಎಂಬ ಆರೋಪದ ಜೊತೆಗೆ ಮಗಳ ಅಪಹರಣ, ಜೀವ ಬೆದರಿಕೆ, ಮತ್ತು ಮದುವೆಯ ಹೆಸರಿನಲ್ಲಿ ಮೋಸ ಎಂಬ ಅನೇಕ ಗುಂಭೀರ ಅಂಶಗಳನ್ನು ಬಗ್ಗಿಸಿದರೆಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಧಾರವಾಡ ಎಸ್‌ಪಿ ಪ್ರತಿಕ್ರಿಯೆ:

ಈ ಕುರಿತು ಧಾರವಾಡದ ಪೋಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದು,

ಯುವತಿಯನ್ನು ಕಾನೂನುಬದ್ಧವಾಗಿ ರಿಜಿಸ್ಟರ್ ಮದುವೆಯಾಗಿ ಮದುವೆಯಾಗಿರುವ ದಾಖಲೆಗಳು ನಮ್ಮ ಮುಂದೆ ಇವೆ. ಆದರೆ ಮದುವೆಯ ಸಂದರ್ಭದಲ್ಲಿ ನೀಡಿದ ದಾಖಲೆಗಳ ನಿಖರತೆ ಕುರಿತು ಈಗ ತನಿಖೆ ನಡೆಯುತ್ತಿದೆ.” ಎಂದು ತಿಳಿಸಿದರು.

ಹಿಂದೂಪರ ಸಂಘಟನೆಗಳ ಆಕ್ರೋಶ

ಪ್ರಕರಣ ಬೆಳಕಿಗೆ ಬಂದ ಕೂಡಲೇ, ಬಜರಂಗದಳ, ವಿಶ್ವಹಿಂದೂ ಪರಿಷತ್ ಸೇರಿದಂತೆ ಹಲವಾರು ಸಂಘಟನೆಗಳು ಠಾಣೆಯ ಎದುರು ಪ್ರತಿಭಟನಾ ಕಾರ್ಯಕ್ಕೆ ಇಳಿದಿವೆ.

ಇದು ‘ಲವ್ ಜಿಹಾದ್’ ಮಾದರಿಯ ನಿಖರ ಪ್ರಕರಣ. ಧರ್ಮ ಬದಲಿಸಿ ಯುವತಿಯ ಭಾವನೆಗಳನ್ನು ದುರ್ಬಳಕೆ ಮಾಡಲಾಗಿದೆ” ಎಂಬ ಆರೋಪಗಳನ್ನು ಸಂಘಟನೆಗಳ ನಾಯಕರು ಮಾಡಿದ್ದಾರೆ.

ಪ್ರಕರಣದ ದಾಖಲೆಗಳು:

  • ಯುವತಿ ಹಾಗೂ ಮುಕಳೆಪ್ಪ ಮದುವೆಯಾಗಿರುವುದು ನೋಂದಾಯಿತ ಮದುವೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.
  • ಆದರೆ ದಾಖಲೆಯು ನಕಲಿ ಆಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದೆ.
  • ಯುವತಿಯ ಪೋಷಕರು ನೀಡಿದ ದೂರಿನಡಿ IPC ಸೆಕ್ಷನ್ಗಳಂತೆ ಅಪಹರಣ, ವಂಚನೆ, ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಮುಂದೇನು?

  • ಮುಕಳೆಪ್ಪನ್ನು ವಿಚಾರಣೆಗಾಗಿ ನೋಟಿಸ್ ನೀಡಲಾಗಿದ್ದು, ಅವರು ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
  • ಯುವತಿಯ ಬೇಸರದ ಹಿನ್ನೆಲೆ, ಒತ್ತಾಯದಿಂದ ಮದುವೆ ಯಾದಿತ್ತೆಂಬ ಮಾಹಿತಿ ಇನ್ನಷ್ಟು ತನಿಖೆಯ ಭಾಗ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *