ಅಮರಾವತಿ (ಆಂಧ್ರಪ್ರದೇಶ) : ದಾವೊಸ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯವನ್ನು ಜಾಗತಿಕ ಆರೋಗ್ಯ ಸೇವೆ, ಶಿಕ್ಷಣ ಮತ್ತು ಅವಿಷ್ಕಾರದ ಕೇಂದ್ರವಾಗಿ ರೂಪಿಸುವಲ್ಲಿನ ಸಹಭಾಗಿತ್ವ ಕುರಿತು ಚರ್ಚೆ ನಡೆಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ದಕ್ಷಿಣ ರಾಜ್ಯದಲ್ಲಿ ಅತ್ಯುತ್ತಮ ಆರೋಗ್ಯ ಅವಿಷ್ಕಾರ ಮತ್ತು ರೋಗಪತ್ತೆ ಕೇಂದ್ರವಾಗಿ ರೂಪಿಸುವ ಕುರಿತು ಇಬ್ಬರು ಚರ್ಚೆ ನಡೆಸಿದರು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೀರ್ಘ ಸಮಯದ ಬಳಿಕ ಬಿಲ್ಗೇಟ್ಸ್ ಅವರನ್ನು ಭೇಟಿ ಮಾಡಿದ್ದು ಸಂತಸ ತಂದೆ. ತಂತ್ರಜ್ಞಾನ ಮತ್ತು ಅವಿಷ್ಕಾರದಲ್ಲಿನ ಅವರ ಗಮನವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಆರೋಗ್ಯ ಮತ್ತು ಎಐ ಅವಿಷ್ಕಾರದ ಸಹಭಾಗಿತ್ವದ ಅವಕಾಶಗಳ ಕುರಿತು ನಾವು ಚರ್ಚಿಸಿದೆವು. ಆಂಧ್ರ ಪ್ರದೇಶದ ಪ್ರಗತಿಯಲ್ಲಿ ಬಿಎಂಜಿಎಫ್ (ಬಿಲ್ ಅಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್) ಸಹಭಾಗಿತ್ವ ಎದುರು ನೋಡುತ್ತಿರುವುದಾಗಿ ಅವರು ಸಿಎಂ ನಾಯ್ಡು ತಿಳಿಸಿದ್ದಾರೆ. ಅವಿಷ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಆಂಧ್ರಪ್ರದೇಶವು ಬದ್ಧವಾಗಿದೆ ಒತ್ತಿ ಹೇಳುತ್ತದೆ. ರಾಜ್ಯದಲ್ಲಿನ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲದಯ ಪ್ರಸ್ತಾವನೆಯ ಸಲಹಾ ಮಂಡಳಿಗೆ ಸೇರುವಂತೆ ಕೂಡ ಗೇಟ್ಸ್ಗೆ ಸಿಎಂ ಆಹ್ವಾನಿಸಿದ್ದಾರೆ
ದಕ್ಷಿಣ ಭಾರತದಲ್ಲಿ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಶನ್ನ ಉಪಕ್ರಮಗಳು ಆಂಧ್ರ ಪ್ರದೇಶದ ಗೇಟ್ವೇ ಆಗಿ ಕಾರ್ಯ ನಿರ್ವಹಿಸುತ್ತಿವೆ. ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ವೇದಿಕೆಯಾಗುವ ಭರವಸೆ ನೀಡಲಾಗುವುದು ಎಂದು ಸಿಎಂ ತಿಳಿಸಿದರು. ಇದಕ್ಕೆ ಮುನ್ನ ಆಂಧ್ರ ಸಿಎಂ ವಿಶಾಖಪಟ್ಟಣಂಅನ್ನು ಚಿಪ್ ವಿನ್ಯಾಸ ಮತ್ತು ಉತ್ಪಾದನಾ ಕೇಂದ್ರಕ್ಕೆ ಗಮನ ಹರಿಸುವಂತೆ ಟೆಕ್ ದೈತ್ಯ ಗೂಗಲ್ಗೆ ಮನವಿ ಮಾಡಿದರು. ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರನ್ನು ಭೇಟಿ ಮಾಡಿ, ಗೂಗಲ್ ಈಗಾಗಲೇ ತನ್ನ ಚಿಪ್ ಅನ್ನು ಅನೇಕ ಕಾರ್ಯಾಚರಣೆಯಲ್ಲಿ ಉತ್ಪಾದನೆ ಮಾಡುತ್ತಿದೆ. ಇದಕ್ಕಾಗಿ ವಿಶಾಖಪಟ್ಟಣದಲ್ಲಿ ಚಿಪ್ ವಿನ್ಯಾಸ ಕೇಂದ್ರ ಸ್ಥಾಪಿಸುವ ಕುರಿತು ಆಲೋಚಿಸುವಂತೆ ತಿಳಿಸಿದ್ದರು.
ಆಂಧ್ರಪ್ರದೇಶದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ಸ್ಥಾಪಿಸಲು ಪರಿಗಣಿಸುವಂತೆ ಅವರು ಪೆಟ್ರೋನಾಸ್ಗೆ ಕೂಡ ವಿನಂತಿಸಿದರು. 2030ರ ಹೊತ್ತಿಗೆ ಹಸಿರು ಅಮೋನಿಯಂಅನ್ನು 5 ಮಿಲಿಯನ್ ಟನ್ ಉತ್ಪಾದಿಸುವ ಗುರಿಯನ್ನು ಪೆಟ್ರೋನಾಸ್ ಹೊಂದಿದ್ದು, ಅವರು ಭಾರತದಲ್ಲಿ ಗ್ರೀನ್ ಹೈಡ್ರೋಜನ್, ಗ್ರೀನ್ ಅಮೋನಿಯಮ್ ಮತ್ತು ಗ್ರೀನ್ ಮೊಲೆಕ್ಯೂಲಸ್ಗೆ ಹೂಡಿಗೆಗೆ ಎದುರು ನೋಡುತ್ತಿದ್ದಾರೆ. ಇದರ ಭಾಗವಾಗಿ ಅವರು, ಆಂಧ್ರಪ್ರದೇಶದ ಕಾಕಿನಾಡದಲ್ಲಿ 15,000 ಕೋಟಿ ರೂಪಾಯಿ ಹೂಡಿಕೆ ಮಾಡುವ ನಿರೀಕ್ಷೆಯನ್ನು ಹೊಂದಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿಶಾಖಪಟ್ಟಣಂನಲ್ಲಿ ಪೆಪ್ಸಿಕೊ ಜಾಗತಿಕ ವಿತರಣಾ ಕೇಂದ್ರ ಮತ್ತು ಪೆಪ್ಸಿಕೊ ಡಿಜಿಟ್ ಹಬ್ ಸ್ಥಾಪಿಸಲು ಪೆಪ್ಸಿ ಇಂಟರ್ನ್ಯಾಶನಲ್ ಫ್ರ್ಯಾಂಚೈಸ್ ಬೆವರೇಜಸ್ನ ಸಿಇಒ ಯುಜೀನ್ ವಿಲ್ಲೆಮ್ಸೆನ್ ಹಾಗೂ ಪೆಪ್ಸಿಕೋ ಫೌಂಡೇಶನ್ನ ಅಧ್ಯಕ್ಷ ಸ್ಟೀಫನ್ ಕೆಹೋ ಭೇಟಿಯಾಗಿ ಮನವಿ ಮಾಡಿದರು.