ಬೆಂಗಳೂರು : ಇತ್ತೀಚೆಗೆ ಧರ್ಮಸ್ಥಳ ಕ್ಷೇತ್ರದ ಸುತ್ತಲೂ ಹರಿದಾಡುತ್ತಿರುವ ಆರೋಪಗಳು ಕೇವಲ ನ್ಯಾಯದ ಹೋರಾಟವಲ್ಲ, ಬದಲಾಗಿ ಒಂದು ದೊಡ್ಡ ಷಡ್ಯಂತ್ರದ ಭಾಗವಾಗಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಈ ಪ್ರಕರಣದ ಹಿಂದೆ ವಿದೇಶಿ ಹಿತಾಸಕ್ತಿಗಳು ಮತ್ತು ಸಂಸ್ಥೆಗಳ ಕೈವಾಡವಿರುವ ಸಾಧ್ಯತೆಯ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತನಿಖೆಯನ್ನು ರಾಷ್ಟ್ರೀಯ ಸಂಸ್ಥೆಗಳಿಗೆ ವಹಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಆರೋಪಗಳು ಮತ್ತು ಅಪಪ್ರಚಾರದ ಹಿಂದೆ ವಿದೇಶಿ ಕೈವಾಡವಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
For More Updates Join our WhatsApp Group :