‘ಅಮೃತವರ್ಷಿಣಿ’ ದಾರಾವಾಹಿ ಮೂಲಕ ರಜಿನಿ ಅವರು ಸಾಕಷ್ಟು ಫೇಮಸ್ ಆದರು. ಹಲವು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಇತ್ತೀಚೆಗೆ ಅವರು ವೈಯಕ್ತಿಕ ಕಾರಣದಿಂದ ಹೆಚ್ಚು ಸದ್ದು ಮಾಡುತ್ತಿದ್ದರು. ಈಗ ಸದ್ದಿಲ್ಲದೆ ಅವರ ವಿವಾಹ ನೆರವೇರಿದೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ರಜನಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ’ ಎಂದು ಕೆಲ ತಿಂಗಳ ಹಿಂದೆ ರಜಿನಿ ಅವರು ಸ್ಪಷ್ಟನೆ ನೀಡಿದ್ದರು.
ರಜಿನಿ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೆಲಸ ಮಾಡಿದ್ದಾರೆ. ‘ಅಮೃತವರ್ಷಿಣಿ’ ಅವರ ವೃತ್ತಿಜೀವನದಲ್ಲಿ ವಿಶೇಷ ಧಾರಾವಾಹಿ ಆಗಿ ಉಳಿದುಕೊಂಡಿದೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಬಳಿಕ ಅವರು ರಿಯಾಲಿಟಿ ಶೋಗಳಲ್ಲೂ ಕಾಣಿಸಿದರು. ಕೆಲವು ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಅವರು ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಅವರು ಸದ್ದು ಮಾಡುತ್ತಿದ್ದರು. ಈಗ ಅವರು ಹೊಸ ಬಾಳು ಆರಂಭಿಸಿದ್ದಾರೆ.
ರಜಿನಿ ಅವರು ಅರುಣ್ ವೆಂಕಟೇಶ್ ಹೆಸರಿನ ಜಿಮ್ ಟ್ರೇನರ್ ಜೊತೆ ವಿಡಿಯೋ ಮಾಡುತ್ತಿದ್ದರು. ಇವರ ಸೋಶಿಯಲ್ ಮೀಡಿಯಾ ಖಾತೆ ತೆಗೆದು ನೋಡಿದರೆ ಒಟ್ಟಾಗಿ ಮಾಡಿದ ಸಾಕಷ್ಟು ರೀಲ್ಸ್ ಕಾಣಬಹುದು. ಈ ಬಗ್ಗೆ ಪ್ರಶ್ನೆ ಮಾಡಿದಾಗ ‘ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್. ಬೆಸ್ಟ್ ಫ್ರೆಂಡ್ನ ಮದುವೆ ಆದರೂ ತಪ್ಪೇನು ಇಲ್ವಲ್ಲ’ ಎಂದಿದ್ದರು ರಜಿನಿ. ಇಂದು (ನವೆಂಬರ್ 10) ರಜಿನಿ ಹಾಗೂ ಅರುಣ್ ವಿವಾಹ ನೆರವೇರಿದೆ. ಕೇವಲ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಈ ಮದುವೆ ಶಾಸ್ತ್ರ ನಡೆದಿದೆ. ದಂಪತಿಗೆ ಎಲ್ಲರೂ ಶುಭ ಕೊರುತ್ತಿದ್ದಾರೆ.
ನಟಿ ಏನು ಹೇಳಿದ್ರು?
‘ನಾಬಿಬ್ಬರೂ ಗಂಡ-ಹೆಂಡತಿ ಅಲ್ಲ. ವಿಡಿಯೋ ಪಾರ್ಟ್ನರ್ ಅಷ್ಟೇ. ಗೆಳೆಯನ ಮದುವೆ ಆದರೂ ತಪ್ಪಿಲ್ಲ. ಅವರು ಹಲವು ವರ್ಷಗಳಿಂದ ನಮ್ಮ ಜೊತೆ ಇದ್ದಿರುತ್ತಾರೆ. ಅವರು ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಅದೇ ರೀತಿ ಬೇರೆಯವರನ್ನು ಮದುವೆ ಆದರೂ ತಪ್ಪಿಲ್ಲ’ ಎಂದಿದ್ದರು ಅಮೃತಾ.
For More Updates Join our WhatsApp Group :
