ಅಹಮದಾಬಾದ್: ಇಲ್ಲಿನ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಯನ್ನು ಥಳಿಸಿ ಕೊ*ಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಮತ್ತು ಸಾರ್ವಜನಿಕರು ಶಾಲೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ.
ಇಲ್ಲಿನ ಸೆವೆಂತ್ ಡೇ ಶಾಲೆಯಲ್ಲಿ ಈ ಹಲ್ಲೆಯ ಘಟನೆ ನಡೆದಿದೆ. ಇಬ್ಬರು ಬಾಲಕರ ನಡುವೆ ಕ್ಷುಲ್ಲಕ ವಿಷಯಕ್ಕೆ ಶುರುವಾದ ವಾಗ್ವಾದ ಗಲಾಟೆಯಾಗಿ ತಿರುಗಿ ಆರೋಪಿಯು ಸಹಪಾಠಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಹೊಡೆತದ ತೀವ್ರತೆಗೆ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಮೃತಪಟ್ಟಿದ್ದಾನೆ. ಸದ್ಯ ಈ ಘಟನೆಗೆ ಕೋಮುಸ್ಪರ್ಶ ಸಿಕ್ಕಿದೆ. ಮೃತ ಬಾಲಕ ಸಿಂಧಿ ಜನಾಂಗಕ್ಕೆ ಸೇರಿದವನಾಗಿದ್ದಾನೆ. ಆತನನ್ನು ಅಲ್ಪಸಂಖ್ಯಾತ ಹುಡುಗ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ವಿದ್ಯಾರ್ಥಿ ಮತ್ತು ಅವನ ಸ್ನೇಹಿತನ ನಡುವಿನ ಇನ್ಸ್ಟಾಗ್ರಾಮ್ ಚಾಟ್ ಬೆಳಕಿಗೆ ಬಂದಿದೆ. ಆರೋಪಿಯು ತನ್ನ ಅಪರಾಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಇವರಿಬ್ಬರ ಚಾಟ್ ಈ ಕೆಳಗಿನಂತಿದೆ.
ಆರೋಪಿ ವಿದ್ಯಾರ್ಥಿ ತನ್ನ ಗೆಳೆಯನೊಂದಿಗೆ ನಡೆಸಿದ ಚಾಟ್ ಹೀಗಿದೆ
ಸ್ನೇಹಿತ: ಸಹೋದರ, ನೀವು ಇಂದು ಏನಾದರೂ ಮಾಡಿದ್ದೀರಾ?
ಆರೋಪಿ: ಹೌದು
ಸ್ನೇಹಿತ: ಅಣ್ಣ, ನೀನು ಇರಿದ್ಯಾ?
ಆರೋಪಿ: ನಿನಗೆ ಯಾರು ಹಾಗೆ ಹೇಳಿದರು?
ಸ್ನೇಹಿತ: ಕರೆ ಮಾಡಿ, ಚಾಟ್ ಮಾಡಬೇಡಿ.
ಆರೋಪಿ: ಇಲ್ಲ, ಇಲ್ಲ.
ಸ್ನೇಹಿತ: ನಿಮ್ಮ ಹೆಸರು ಬಂದಿದೆ, ಅದಕ್ಕಾಗಿಯೇ ನಾನು ಕೇಳಿದೆ.
ಆರೋಪಿ: ಈಗ ನನ್ನ ಅಣ್ಣ ನನ್ನ ಜೊತೆ ಇದ್ದಾನೆ, ಅವನಿಗೆ ಗೊತ್ತಿಲ್ಲ. ನಿನಗೆ ಯಾರು ಹೇಳಿದರು?
ಸ್ನೇಹಿತ: ಅವನು ಬಹುಶಃ ಸತ್ತಿರಬಹುದು.
ಆರೋಪಿ : ಹೌದು… ಅದು ಯಾರು?
ಸ್ನೇಹಿತ: ನೀನು ಅವನಿಗೆ ಇರಿದಿದ್ದೀಯಾ? ಅದನ್ನೇ ನಾನು ಕೇಳುತ್ತಿದ್ದೇನೆ.
ಆರೋಪಿ: ಹೌದು.
ಚಾಕು ಇರಿದ ಶಾಲೆ ಹಿಂದೆ ಓಡಿ ಹೋದ ವಿದ್ಯಾರ್ಥಿ
ಚಾಕು ಇರಿದ ಬಳಿಕ ವಿದ್ಯಾರ್ಥಿ ಶಾಲೆ ಹಿಂದೆ ಓಡಿ ಹೋಗಿರೋದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಈ ವಿಷಯವನ್ನು ಪೊಲೀಸರಿಗೆ ಶಾಲಾ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಆರೋಪಿ ವಿದ್ಯಾರ್ಥಿ ಅಪ್ರಾಪ್ತನಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಘಟನೆ ಖಂಡಿಸಿ ಅಹಮದಾಬಾದ್ ನಗರದ ವಿವಿಧಡೆ ಪ್ರತಿಭಟನೆಗಳು ನಡೆದಿವೆ.
ಘಟನೆ ಹೇಗೆ ನಡೆಯಿತು?
ಈ ಘಟನೆ ಶಾಲೆಯ ಹೊರಗೆ ನಡೆದಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಶಾಲೆಯ ಮುಂಭಾಗದಲ್ಲಿರುವ ಮನಿಷಾ ಸೊಸೈಟಿಯ ಗೇಟ್ ಬಳಿ ಬಂದಿದ್ದಾನೆ. ಈ ವೇಳೆ ಅವನಿಗೆ ಎದುರಾದ 8ನೇ ಕ್ಲಾಸ್ ವಿದ್ಯಾರ್ಥಿ ಜಗಳ ತೆಗೆದಿದ್ದಾನೆ. ಗಲಾಟೆಯಾಗುತ್ತಿರುವ ಸಂದರ್ಭದಲ್ಲಿ 5 ರಿಂದ 7 ವಿದ್ಯಾರ್ಥಿಗಳು ಘಟನಾ ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ. 8 ನೇ ತರಗತಿಯ ವಿದ್ಯಾರ್ಥಿ ತನ್ನ ಜೇಬಿನಿಂದ ಚಾಕುವನ್ನು ಹೊರತೆಗೆದು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಬಳಿಕ ಆರೋಪಿ ವಿದ್ಯಾರ್ಥಿ ಓಡಿ ಹೋಗಿದ್ದಾನೆ.
For More Updates Join our WhatsApp Group :