ಬೆಂಗಳೂರು: ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ಅವರು ಮಚ್ಚು ಹಿಡಿದು ಭಯದ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಇದೀಗ ಅವರಿಬ್ಬರನ್ನು ಸ್ಟೇಷನ್ ಬೇಲ್ ಮೇಲೆ ನೆನ್ನೆ ರಾತ್ರಿಯೇ ಬಿಡುಗಡೆ ಮಾಡಲಾಗಿದೆ. ಪೊಲೀಸರು ಬಿಡುಗಡೆಗೆ ಕಾರಣ ನೀಡಿದ್ದಾರೆ. ಹೊರ ಬಂದ ಬಳಿಕ ವಿನಯ್ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಮತ್ತೆ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದಾರೆ.

ರೀಲ್ಸ್ ಹುಚ್ಚಿಗೆ ಈ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಅವರು ಮಚ್ಚು ಹಿಡಿದು ರಸ್ತೆಯಲ್ಲಿ ರೀಲ್ಸ್ ಮಾಡಿದ್ದರು. ಸಾರ್ವಜನಿಕವಾಗಿ ಭಯದ ವಾತಾವರಣ ನಿರ್ಮಾಣ ಹಿನ್ನೆಲೆ ಅವರ ವಿರುದ್ಧ ಬಸವೇಶ್ವರ ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ಮಚ್ಚು ಪರಿಶೀಲಿಸಿದ ಪೊಲೀಸರಿಗೆ ಇದು ಪೈಬರ್ ಮಚ್ಚು ಎಂಬುದು ಗೊತ್ತಾಗಿದೆ. ಈ ಕಾರಣದಿಂದ ಅವರನ್ನು ಸ್ಟೇಷನ್ ಬೇಲ್ ಮೇಲೆ ರಿಲೀಸ್ ಮಾಡಲಾಗಿದೆ. ಸೋಮವಾರ ರಾತ್ರಿ 10.30 ಅವರು ಠಾಣೆಯಿಂದ ಬಿಡುಗಡೆಯಾದರು ಎನ್ನುವ ಮಾಹಿತಿ ಲಭ್ಯವಾಗಿದೆ.
ನಟ ದರ್ಶನ್ ಸಿನಿಮಾ ಹೆಸರಗಳನ್ನು ರಜತ್ ಹಾಕಿಕೊಂಡಿದ್ದರು. ವಿನಯ್ ಗೌಡ ಸಹ ಪುಷ್ಪರಾಜ್ ರೀತಿಯಲ್ಲಿ ಇಬ್ಬರು ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಪೊಲೀಸರು ಅವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಮಾರ್ಚ್ 20 ರಂದು ಪ್ರಕರಣ ದಾಖಲಿಸಿದ್ದರು. ಸೋಮವಾರ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು.
ಹೀಗೆ ವಿಚಾರಣೆ ಮಾಡಿದ ಪೊಲೀಸರಿಗೆ ಇವರಿಬ್ಬರು ಬಳಸಿದ್ದ ಮಚ್ಚು ಪೈಬರ್ ಮಚ್ಚು ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಇಬ್ಬರು ಮಾಜಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದಾಗ ಭಾರಿ ಸುದ್ದಿ ಮಾಡಿದ್ದರು. ರಜತ್ ತಾನು ಡಿ.ಬಾಸ್ ದರ್ಶನ್ ತುಗೂದೀಪ ಫ್ಯಾನ್ ಎಂದು ಹೇಳಿಕೊಂಡಿದ್ದರು. ಡೈಲಾಗ್ ಹೊಡೆದಿದ್ದರು. ಇತ್ತೀಚೆಗೆ ರಜತ್ ಬಟ್ಟೆ ಮೇಲೆ ಡಿ.ಬಾಸ್ ಹೆಸರು ಬರೆಸಿಕೊಂಡಿದ್ದರು. ಇದು ದರ್ಶನ್ ಕೆಲ ಅಭಿಮಾನಿಗಳ ಸಿಟ್ಟಿಗೂ ಕಾರಣವಾಗಿತ್ತು. ಅದರ ನಂತರ ಮಾಡಿದ್ದ ರೀಲ್ಸ್ ರಜತ್, ವಿನಯ್ ಅವರಿಗೆ ಸಂಕಷ್ಟ ತಂದೊಡ್ಡಿತ್ತು.
ಬಿಡುಗಡೆ ಬಳಿಕ ವಿನಯ್ ವಿಡಿಯೋ ಪೋಸ್ಟ್ ಪೊಲೀಸ್ ಕಸ್ಟಡಿಯಿಂದ ಹೊರ ಬಂದ ಬಳಿಕ ವಿನಯ್ ಗೌಡ ಅವರು ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದು ಹೊಸ ದಿನದ ಆರಂಭ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮೊಬ್ಬರದ್ದೆ ‘ಪುಷ್ಪಾ ಹಾಡಿನ’ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ಒಂದಷ್ಟು ಸ್ಪಷ್ಟನೆ ನೀಡಲು ಅವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.