ನಡು ರಸ್ತೆಯಲ್ಲೇ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ

ಇಡುಕ್ಕಿ(ಕೇರಳ): ತಮಿಳುನಾಡು – ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಹೀಗಾಗಿ, ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್​ ಆಗಿತ್ತು. ಮಂಗಳವಾರ ನಸುಕಿನ ಜಾವ ಈ ಘಟನೆ ನಡೆದಿದೆ

ಹೆಣ್ಣು ಆನೆ ನಡು ರಸ್ತೆಯಲ್ಲೇ ಮರಿಗೆ ಜನ್ಮ ನೀಡುತ್ತಿದ್ದಂತೆ ಮಾರಾಯೂರ್​​ – ಇಡುಕ್ಕಿ ಹೆದ್ದಾರಿ ಬಂದ್​ ಆಗಿತ್ತು. ಹೀಗಾಗಿ, ಎರಡು ಬದಿ ರಸ್ತೆ ಸಂಚಾರ ಬಂದ್​ ಆಗಿತ್ತೆಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ನವಜಾತ ಆನೆ ಹಾಗೂ ಅದರ ತಾಯಿ ಹತ್ತಿರದ ಅರಣ್ಯಕ್ಕೆ ಹೋದ ನಂತರ ಸಂಚಾರ ಪುನಾರಂಭಗೊಂಡಿದೆ ಎಂದು ತಿಳಿಸಿದ್ದಾರೆ. ನಡುರಸ್ತೆಯಲ್ಲಿ ಆನೆ ಜನ್ಮ ನೀಡಿರುವ ದೃಶ್ಯ ಇದೀಗ ವೈರಲ್​ ಆಗಿವೆ. ಈ ಹಿಂದೆ ಸಹ ಇಂತಹ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *