ಭಾನು ಭೂಮಿ ಮೀರಿದ ಪ್ರೀತಿಗೆ ವೇದಿಕೆಯಾಯ್ತು ಹಾಸನ.
ಹಾಸನ: ಪ್ರೀತಿ ಪ್ರೇಮಕ್ಕೆ ದೇಶ ಭಾಷೆಗಳ ಗಡಿಯಿಲ್ಲ ಎನ್ನುತ್ತಾರೆ. ಹೃದಯದ ಮಾತಿಗೆ ಜಾತಿ ಧರ್ಮಗಳ ಬೇಲಿಯೂ ಅಡ್ಡ ಬರಲ್ಲ ಎಂಬ ಮಾತಿದೆ. ಹಾಸನದಲ್ಲಿ ನಡೆದ ಇದೊಂದು ವಿಶೇಷ ಪ್ರೇಮ ವಿವಾಹವು ಪ್ರೀತಿಯ ಬೆಸುಗೆ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸಾರಿ ಹೇಳಿದೆ. ಜಾತಿ ಬೇರೆ, ಧರ್ಮ ಬೇರೆ, ದೇಶ ಬೇರೆ ಭಾಷೆ ಬೇರೆ ಆದರೂ ಹೃದಯದ ಮಿಡಿತಕ್ಕೆ ಮನಸೋತ ಈ ಸುಂದರ ಜೋಡಿ ಹಿರಿಯನ್ನು ಒಪ್ಪಿಸಿ ಸತಿ ಪತಿಗಳಾಗಿದ್ದಾರೆ. ಸಾಗರದಾಚೆಯ ಇಂಗ್ಲೆಂಡ್ನ ಪ್ರೇಮಿ, ವಿಶ್ವ ವಿಖ್ಯಾತ ಐತಿಹಾಸಿಕ ನಗರಿ ಬೇಲೂರಿನ ಪ್ರೇಯಸಿಯ ಮದುವೆ ಸರಳ ಸಂಭ್ರಮದಿಂದ ಹಿಂದೂ ಸಂಪ್ರದಾಯದಂತೆ ಭಾನುವಾರ ನೆರವೇರಿದೆ.
ಪರಸ್ಪರ ಇಷ್ಟಪಟ್ಟ ಯುವ ಜೋಡಿಗಳು ಮನೆಯವರನ್ನು ಒಪ್ಪಿಸಿ ಪ್ರೀತಿ ಪ್ರೇಮದ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಮೂರು ಗಂಟಿನ ಮೂಲಕ ಬದುಕಿನ ನಂಟು ಬೆಸೆದಿದ್ದಾರೆ. ಸಾಗರದಾಚೆಯ ಪ್ರೀತಿಗೆ ಭಾರತೀಯ ನೆಲದಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದೆ. ಪ್ರೀತಿ ಪ್ರೇಮಗಳಿಗೆ ದೇಶ ಭಾಷೆಗಳ ಗಡಿಯಿಲ್ಲ, ಹೃದಯದ ಭಾಷೆಗೆ ಜಾತಿ ಧರ್ಮಗಳ ಗಡಿಯಿಲ್ಲ ಎನ್ನೋದು ಮತ್ತೆ ಸಾಬೀತಾಗಿದೆ.
For More Updates Join our WhatsApp Group :



