ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ – ರಾಧಿಕಾ

ಮುಂಬೈ : ದೇಶದ ಸಿರಿವಂತ ಉದ್ಯಮಿ ಮುಖೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಪುತ್ರ ಅನಂತ್​ ಮದುವೆ ಕಳೆದ ದಿನ (ಶುಕ್ರವಾರ, ಜುಲೈ 12) ಅದ್ಧೂರಿಯಾಗಿ ಜರುಗಿತು. ವೈಭವೋಪೇತ ವಿವಾಹ ಸಮಾರಂಭದಲ್ಲಿ ಅನಂತ್ ಅಂಬಾನಿ ಅವರು ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕ್ಷಣಕ್ಕೆ ಬಾಲಿವುಡ್​​​ ಸೇರಿದಂತೆ ವಿಶ್ವದ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಪುತ್ರ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಸೋಷಿಯಲ್​ ಮೀಡಿಯಾದಲ್ಲೀಗ ಅಂಬಾನಿ ಗ್ರ್ಯಾಂಡ್​ ವೆಡ್ಡಿಂಗ್​​​ನದ್ದೇ ಸದ್ದು.

ವೈರಲ್​ ಆಗುತ್ತಿರುವ ಫೋಟೋ ವಿಡಿಯೋಗಳಲ್ಲಿ ನವ ದಂಪತಿ ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಸುತ್ತುವರಿದಿರುವುದನ್ನು ಕಾಣಬಹುದು. ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಅವರು ವಿವಾಹದ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅನಂತ್ ಮತ್ತು ರಾಧಿಕಾ ಫೆರಾ ಶಾಸ್ತ್ರಕ್ಕೆ ಹೋಗುತ್ತಿರುವುದನ್ನು ಕಾಣಬಹುದು

Leave a Reply

Your email address will not be published. Required fields are marked *