Padma Bhushan ಪ್ರಶಸ್ತಿ ಸ್ವೀಕರಿಸಿದ Anant Nag : 5 ದಶಕಗಳ ಕಲಾಸೇವೆಗೆ ಸಂದ ಗೌರವ

Padma Bhushan ಪ್ರಶಸ್ತಿ ಸ್ವೀಕರಿಸಿದ Anant Nag : 5 ದಶಕಗಳ ಕಲಾಸೇವೆಗೆ ಸಂದ ಗೌರವ

ಕನ್ನಡ ಚಿತ್ರರಂಗದ ಹಿರಿಯ, ಜನಪ್ರಿಯ, ಪ್ರತಿಭಾನ್ವಿತ ನಟ ಅನಂತ್ ನಾಗ್ ಅವರು ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಹುಭಾಷಾ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ವೀಕ್ಷಕರು, ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿರುವ ಅನಂತ್ ನಾಗ್ ಅವರ ಹೆಸರನ್ನು 2024-25ನೇ ಸಾಲಿನ ಪದ್ಮ ಭೂಷಣ ಪ್ರಶಸ್ತಿಗೆ ಘೋಷಿಸಲಾಗಿತ್ತು. ಮಂಗಳವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

5 ದಶಕಗಳ ಕಲಾಸೇವೆ: ಅನಂತ್ ನಾಗ್ 5 ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ಅರ್ಪಿಸಿದ್ದಾರೆ. ನಟನ ಕಲಾಸೇವೆ ಮುಂದುವರೆದಿದೆ. ಚಿತ್ರರಂಗ ಮಾತ್ರವಲ್ಲದೇ ರಾಜಕೀಯಕ್ಕೂ ಪದಾರ್ಪಣೆ ಮಾಡಿದ್ದ ಅನಂತ್ ನಾಗ್ ಕರ್ನಾಟಕದಿಂದ ಎಂಎಲ್ಎ ಹಾಗೂ ಎಂಎಲ್ಸಿಯಾಗಿಯೂ ಆಯ್ಕೆಯಾಗಿದ್ದರು. ಕಲಾರಂಗದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.

ಕರ್ನಾಟಕದ ಜನರಿಗೆ ಅರ್ಪಣೆ: ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ಸಂದರ್ಭ ”ಈ ಗೌರವವನ್ನು ಕರ್ನಾಟಕದ ಜನರಿಗೆ ಅರ್ಪಣೆ ಮಾಡುತ್ತೇನೆ” ಎಂದು ಅನಂತ್ ನಾಗ್ ತಿಳಿಸಿದ್ದರು.

Leave a Reply

Your email address will not be published. Required fields are marked *