ಆಂಧ್ರ ಪ್ರದೇಶ || ಕಿಯಾ ಕಂಪನಿಯ 900 ಕಾರು ಎಂಜಿನ್ ಗಳನ್ನು ಕದ್ದ ಖತರ್ನಾಕ್ ಕಳ್ಳರು

ಆಂಧ್ರ ಪ್ರದೇಶ || ಕಿಯಾ ಕಂಪನಿಯ 900 ಕಾರು ಎಂಜಿನ್ ಗಳನ್ನು ಕದ್ದ ಖತರ್ನಾಕ್ ಕಳ್ಳರು

ಆಂಧ್ರ ಪ್ರದೇಶ : ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿರುವ ಹೆಸರಾಂತ ದಕ್ಷಿಣ ಕೊರಿಯನ್ ಕಾರು ತಯಾರಿಕಾ ಕಂಪನಿ Kia ಗೆ ಸಂಬಂಧಿಸಿದ ಆಶ್ಚರ್ಯ ಚಕಿತಗೊಳಿಸುವ ಘಟನೆ ಬಹಿರಂಗವಾಗಿದೆ. ಹೌದು.. ಕಳೆದ 5 ವರ್ಷಗಳಲ್ಲಿ ಸುಮಾರು 900 ಕಾರು ಎಂಜಿನ್ಗಳು ಕಳವಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಪೆನುಕೊಂಡದಲ್ಲಿರುವ Kia ಕಾರು ತಯಾರಿಕಾ ಘಟಕದಿಂದ ಈ ಎಂಜಿನ್ಗಳನ್ನು ಕಳವು ಮಾಡಲಾಗಿದೆ. ಕಂಪನಿಯು ಮಾರ್ಚ್ 19ರಂದು ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದ್ದು, ಇದೀಗ ತನಿಖೆ ಆರಂಭವಾಗಿದೆ.

2020ರಿಂದ ಮುಂದುವರೆದ ಕಳವು ಪ್ರಕರಣಗಳು

ಪೆನುಕೊಂಡದ ಉಪವಿಭಾಗ ಪೊಲೀಸ್ ಅಧಿಕಾರಿಯಾದ ವೈ ವೆಂಕಟೇಶ್ವರ್ಲು ಮಾಹಿತಿ ನೀಡಿ,  ಈ ಕಳವು 2020ರಲ್ಲಿಯೇ ಆರಂಭವಾಗಿದೆ. ಇದೊಂದು ನಿರಂತರವಾಗಿರುವ ಚಟುವಟಿಕೆ. ಪ್ರಾಥಮಿಕ ತನಿಖೆಯಲ್ಲಿ 900 ಎಂಜಿನ್ಗಳು ಕಳವಾಗಿದೆ ಎಂಬುದು ದೃಢವಾಗಿದೆ. ಈ ಎಂಜಿನ್ಗಳನ್ನು ಕಾರು ತಯಾರಿಕಾ ಘಟಕಕ್ಕೆ ಸಾಗಿಸುವ ವೇಳೆ ಅಥವಾ ಘಟಕದ ಆವರಣದೊಳಗೇ ಕಳವು ಮಾಡಲಾಗಿದೆ ಎಂದು ಶಂಕಿಸಿರುವುದಾಗಿ ತಿಳಿಸಿದ್ದಾರೆ.

ಒಳಗಿರುವ ಸಿಬ್ಬಂದಿಗಳ ಕೈಚಳಕ

ಪೊಲೀಸಿನ ಪ್ರಕಾರ, ಈ ಮಟ್ಟದ ದೊಡ್ಡ ಕಳವಿಗೆ ಕಂಪನಿಯ ಒಳಗಿರುವ ಕೆಲ ಸಿಬ್ಬಂದಿ ಅಥವಾ ಮಾಜಿ ಸಿಬ್ಬಂದಿಗಳ ಪಾತ್ರವಿದೆ ಎನ್ನಲಾಗಿದೆ.  ಪ್ಲಾಂಟ್ನಿಂದ ಯಾವುದೇ ವಸ್ತು ನಿರ್ವಹಣೆ ವಿಭಾಗದ ಅನುಮತಿಯಿಲ್ಲದೇ ಹೊರಗೆ ಹೋಗುವುದೇ ಸಾಧ್ಯವಿಲ್ಲ. ಇದು ಹೊರಗಿನವರ ಕೆಲಸವೇ ಅಲ್ಲ ಎಂದು ವೆಂಕಟೇಶ್ವರ್ಲು ಹೇಳಿದ್ದಾರೆ. 

ಪೊಲೀಸ್ ವಿಶೇಷ ತನಿಖಾ ತಂಡ ರಚನೆ

ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ ವಿಶೇಷ ತನಿಖಾ ತಂಡಗಳನ್ನು ನೇಮಿಸಲಾಗಿದೆ. ಸಾಕ್ಷ್ಯಾಧಾರವಾಗಿ ಹಲವು ದಾಖಲೆಗಳು, ಇನ್ವೆಂಟರಿ ರಿಪೋರ್ಟ್ಗಳು ಪೊಲೀಸ್ ವಶದಲ್ಲಿವೆ.

Leave a Reply

Your email address will not be published. Required fields are marked *