ಕೊಪ್ಪಳ: ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಮೇಲೆ ಮತ್ತೊಮ್ಮೆ ಅಕ್ರಮದ ಕನ್ನ ಬಿದ್ದಿದ್ದು, ಕೊಪ್ಪಳದ ಕುರುಬರ ಓಣಿಯಲ್ಲಿ ರೇಷನ್ ಅಂಗಡಿಯ ಪಕ್ಕದಲ್ಲಿಯೇ ಅಕ್ಕಿ ಖರೀದಿ–ಮಾರಾಟದ ದಂಧೆ ನಡೆದಿದೆ. ಖಾಸಗಿ ಕ್ಯಾಮೆರಾದ ಕಣ್ಣಿಗೆ ಈ ದೃಶ್ಯ ಸೆರೆಯಾಗುತ್ತಿದ್ದಂತೆಯೇ ಮಹಿಳೆಯೊಬ್ಬಳು ಪರಾರಿಯಾದ ಘಟನೆಯು ಈಗ ಮಾಧ್ಯಮದ ಮೂಲಕ ಬಹಿರಂಗವಾಗಿದೆ.
ಕ್ಯಾಮೆರಾ ನೋಡಿ ಓಡಿದ ಮಹಿಳೆ – ಅಕ್ಕಿ, ತೂಕ ಯಂತ್ರ ಬಿಟ್ಟು ಪರಾರಿಯಾಗಿದ್ದಳು!
ರೇಷನ್ ಅಂಗಡಿಯ ಪಕ್ಕದಲ್ಲೇ ಹಲವಾರು ಫಲಾನುಭವಿಗಳು ತಮ್ಮ ಅನ್ನಭಾಗ್ಯ ಅಕ್ಕಿಯನ್ನು ಮಾರುತ್ತಿದ್ದರೆ, ಮಹಿಳೆಯೊಬ್ಬಳು ಅದನ್ನು ಖರೀದಿಸುತ್ತಿದ್ದರು. TV9 ಮಾಧ್ಯಮದ ಕ್ಯಾಮೆರಾ ನೋಡಿ ಮಹಿಳೆ ಅಲ್ಲಿಯೇ ಅಕ್ಕಿ ಬಿಟ್ಟು, ತೂಕದ ಯಂತ್ರ ಎತ್ತಿಕೊಂಡು ಓಡಿದ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಧಿಕಾರಿಗಳ ವಿಳಂಬ – ಮಾಲಿಕನ ಆಕ್ರೋಶ
ಈ ದಂಧೆ ರೇಷನ್ ಅಂಗಡಿಯ ಬಾಗಿಲು ಮುಂಭಾಗದಲ್ಲಿ ನಡೆಯುತ್ತಿದ್ದರೂ, ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಾಲಹರಣ ಮಾಡಿರುವ ಆರೋಪ** ಅಂಗಡಿ ಮಾಲಿಕ ಹಾಲಯ್ಯ** ಅವರಿಂದ ಕೇಳಿ ಬಂದಿದೆ. “ಅಕ್ಕಿ ಊಟ ಮಾಡಲು, ಮಾರಾಟ ಮಾಡಲು ಅಲ್ಲ” ಎಂದು ಅವರು ಖಡಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಹಾರ ಇಲಾಖೆಯ ತಡದ ಎಚ್ಚರಿಕೆ – ಇನ್ನು ಮುಂದೆ ಕಠಿಣ ಕ್ರಮ!
ಈ ಪ್ರಕರಣ ಮಾಧ್ಯಮದ ಬೆಳಕಿಗೆ ಬಂದ ನಂತರ, ಆಹಾರ ಇಲಾಖೆ ಅಧಿಕಾರಿ A.D. ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಇನ್ನು ಮುಂದೆ ಯಾರಾದರೂ ರೇಷನ್ ಅಕ್ಕಿ ಮಾರಾಟ ಮಾಡುತ್ತಿದ್ದು ಕಂಡುಬಂದರೆ, ಅವರ ರೇಷನ್ ಕಾರ್ಡ್ ರದ್ದು ಮಾಡಲಾಗುವುದು” ಎಂದು ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




