ಭಾರತಕ್ಕೆ ಮತ್ತೊಂದು ಕಂಚು: 57 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಅಮನ್ ಸೆಹ್ರಾವತ್​​ಗೆ ಪ್ರಶಸ್ತಿ

ಪ್ಯಾರಿಸ್, ಫ್ರಾನ್ಸ್​: ಶುಕ್ರವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ 57 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಗ್ರ್ಯಾಪ್ಲರ್ ಅಮನ್ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದುಕೊಂಡರು.

21ರ ಹರೆಯದ ಭಾರತೀಯ ಕುಸ್ತಿಪಟು ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ವಿರುದ್ಧ 13-5 ಅಂತರದಲ್ಲಿ ಜಯ ಸಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಅಮನ್ ತಮ್ಮ ಚೊಚ್ಚಲ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ಯಾರಿಸ್ 2024 ರಲ್ಲಿ ಭಾರತಕ್ಕೆ ಮೊದಲ ಕುಸ್ತಿ ಪದಕವನ್ನು ತಂದು ಕೊಟ್ಟಿದ್ದಾರೆ.

ಅಮನ್ ಸೆಹ್ರಾವತ್ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 7ನೇ ಭಾರತೀಯ ಕುಸ್ತಿಪಟು ಆಗಿದ್ದಾರೆ. ಈ ಪಂದ್ಯದಲ್ಲಿ ಪೋರ್ಟೊ ರಿಕನ್, ಅಮಾನ್ ಅವರ ಕಾಲನ್ನು ಗಟ್ಟಿಯಾಗಿ ಹಿಡಿಯುವ ಮೂಲಕ ಅಂಕಗಳಿಕೆ ಆರಂಭಿಸಿದರು, ಹೀಗೆ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದರು. ಆದರೆ ಬಳಿಕ ತಿರುಗಿ ಬಿದ್ದ ಅಮನ್ ಪುನರಾಗಮನ ಮಾಡಿದರು ಮತ್ತು ಎರಡು ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಡೇರಿಯನ್ ಟೋಯ್, ಅಮಾನ್ ಅವರ ಕಾಲುಗಳನ್ನು ಹಿಡಿದು, ಎರಡು ಪಾಯಿಂಟ್‌ಗಳನ್ನು ಗೆದ್ದು ಮುನ್ನಡೆ ಸಾಧಿಸಿದರು. ಮೊದಲ ಮೂರು ನಿಮಿಷಗಳ ಆಟ ಮುಗಿದ ನಂತರ ಅಮನ್ ಮತ್ತೊಮ್ಮೆ ಕಂಚಿನ ಪದಕದ ಹಣಾಹಣಿಯಲ್ಲಿ ಮುನ್ನಡೆ ಸಾಧಿಸಿದರು.

ಪಂದ್ಯ ಮುಗಿಯಲು ಕೇವಲ 37 ಸೆಕೆಂಡ್‌ಗಳು ಬಾಕಿಯಿರುವಾಗ, ಅಮನ್ ಎರಡು ಅಂಕಗಳನ್ನು ಗಳಿಸಿದರು ಮತ್ತು ತಾಂತ್ರಿಕ ಶ್ರೇಷ್ಠತೆಯೊಂದಿಗೆ ಗೆಲುವು ಸಾಧಿಸುವ ಅವಕಾಶವನ್ನು ಪಡೆದುಕೊಂಡರು. ಕೊನೆಯಲ್ಲಿ, ಡೇರಿಯನ್ ಬಿಗಿ ಹಿಡಿತಕ್ಕೆ ಪ್ರಯತ್ನಿಸಿದರು, ಆದರೆ ಮತ್ತೊಂದು ಪಾಯಿಂಟ್ ಬಿಟ್ಟುಕೊಟ್ಟರು. 2008ರ ನಂತರ ಇದು ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕವಾಗಿದೆ.

Leave a Reply

Your email address will not be published. Required fields are marked *