ಆನೆ ದಂತದ ಕಳ್ಳಸಾಗಣೆಯ ಕರಾಳ ಕಥೆ ‘ಕಾಟಾಳನ್’.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಕ್ತ ಚಂದನದ ಕಳ್ಳ ಸಾಗಣೆಯ ಕಥೆಯನ್ನು ಹೇಳಲಾಗಿತ್ತು. ಈಗ ‘ಕಾಟಾಳನ್’ ಹೆಸರಿನ ಮಲಯಾಳಂ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಆನೆ ದಂತದ ಕಳ್ಳ ಸಾಗಣೆಯ ಕರಾಳ ಜಗತ್ತನ್ನು ತೆರೆದಿಡಲು ನಿರ್ದೇಶಕರು ಪ್ರಯತ್ನಿಸಿದಂತಿದೆ. ಇದರ ಜೊತೆಗೆ ಭರ್ಜರಿ ಆ್ಯಕ್ಷನ್ ಕೂಡ ಸಿನಿಮಾದಲ್ಲಿ ಇರಲಿದೆ.
‘ಕಾಟಾಳನ್’ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆ ಕಂಡಿದೆ. ಇದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಈ ಸಿನಿಮಾ ಮೇ 14ರಂದು ರಿಲೀಸ್ ಆಗಲಿದೆ. ‘ಕಾಟಾಳನ್’ ಮಲಯಾಳಂ ಚಿತ್ರ. ಈ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಕಾಣಲಿದೆ ಎಂಬುದು ವಿಶೇಷ.
ಈ ಚಿತ್ರದಲ್ಲಿ ಪಾತ್ರಗಳ ಜೊತೆಗೆ ಆನೆಗಳು ಕೂಡ ಹೈಲೈಟ್ ಆಗಿವೆ. ಆನೆಗಳ ಜೊತೆಗಿನ ಸಾಹಸ ದೃಶ್ಯ ಟೀಸರ್ನಲ್ಲಿ ಗಮನ ಸೆಳೆದಿವೆ. ದಂತದ ಕಳ್ಳಸಾಗಣೆ ವಿಷಯ ಕೂಡ ಹೈಲೈಟ್ ಆಗಿದೆ. ಸಾಮಾನ್ಯವಾಗಿ ಆನೆಗಳ ಜೊತೆಗಿನ ಸೆಣೆಸಾಟ ಎಂದಾಗ ಗ್ರಾಫಿಕ್ಸ್ ಬಳಸುತ್ತಾರೆ. ಆದರೆ, ನೈಜವಾಗಿ ಇದನ್ನು ಚಿತ್ರೀಕರಿಸಲಾಗಿದೆ. ಅಂತರಾಷ್ಟ್ರೀಯ ಸ್ಟಂಟ್ ಕೋ-ಆರ್ಡಿನೇಟರ್ ಕೇಚಾ ಖಾನ್ಫಕ್ಡಿ ನೇತೃತ್ವದಲ್ಲಿ ಥೈಲ್ಯಾಂಡ್ನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
‘ಕಾಟಾಳನ್’ ಸಿನಿಮಾನ ಪೌಲ್ ಜಾರ್ಜ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಂಟನಿ ವರ್ಗೀಸ್, ‘ಪುಷ್ಪ’ ಖ್ಯಾತಿಯ ತೆಲುಗು ನಟ ಸುನೀಲ್, ಕಬೀರ್ ಸಿಂಗ್, ದುಶಾರಾ ವಿಜಯನ್ ಮೊದಲಾದವರು ನಟಿಸಿದ್ದಾರೆ. ಯಾವುದೇ ಸಿನಿಮಾ ಯಶಸ್ಸು ಕಾಣಬೇಕು ಎಂದರೆ ಸಂಗೀತದ ಪಾತ್ರ ದೊಡ್ಡದಿರುತ್ತದೆ. ಈ ಚಿತ್ರಕ್ಕೆ ಕನ್ನಡದ ಬಿ. ಅಜನೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೀಸರ್ನ ಹಿನ್ನೆಲೆ ಸಂಗೀತ ಗಮನ ಸೆಳೆಯುವ ರೀತಿಯಲ್ಲಿದೆ.
ಕ್ಯೂಬ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಶರೀಫ್ ಮೊಹಮ್ಮದ್ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್ಗೂ ಮೊದಲೇ ಸದ್ದು ಮಾಡುತ್ತಿದ್ದು, ಒಟಿಟಿ ಹಾಗೂ ಟಿವಿ ಹಕ್ಕಿಗೆ ಬೇಡಿಕೆ ಬಂದಿದೆ.
For More Updates Join our WhatsApp Group :




