ತುಮಕೂರು: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ತೆಗೆದುಹಾಕಲಾಗಿದೆ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ವೈದ್ಯರಿಗೆ ಸರ್ಕಾರದ ಯಶಸ್ವಿನಿ ಟ್ರಸ್ಟ್ ಟ್ರಸ್ಟಿಯಾಗಿ ನೇಮಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಇನ್ನು ಶ್ರೀಧರ್ ಅವರ ನೇಮಕಕ್ಕೆ ತಿಪಟೂರು ಕಾಂಗ್ರೆಸ್ ಶಾಸಕ ಷಡಾಕ್ಷರಿ ಅವರೇ ಶಿಫಾರಸು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದವು.
ಇನ್ನು ಈ ಬಗ್ಗೆ ಸ್ವತಃ ಷಡಾಕ್ಷರಿ ಅವರೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣದಿಂದ ಸಿಎಂಗೆ ಮುಜುಗರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಡಾ.ಶ್ರೀಧರ್ ಆರ್.ಎಸ್.ಎಸ್ ನಲ್ಲಿ ಸಕ್ರಿಯವಾಗಿರುವುದು ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನಿಗಳು ಜನರ ಸೇವೆ ಮಾಡಿದ್ದಾರೆ ಅವಕಾಶ ನೀಡಿ ಎಂದು ಪ್ರಸ್ತಾಪ ಮಾಡಿದ್ದರು. ಉಚಿತವಾಗಿ ಆಪರೇಷನ್, ಔಷಧಿ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಎಂದು ಮನವಿ ಮಾಡಿದ್ದೆ.ನಾವು ಆರ್.ಎಸ್.ಎಸ್ ಬೆಂಬಲಿಸುವುದಿಲ್ಲ. ನನಗೆ ಆರ್.ಎಸ್.ಎಸ್ ಸಂಪರ್ಕ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
For More Updates Join our WhatsApp Group :
