ಪುನೀತ್ ರಾಜ್ಕುಮಾರ್ ನಿಧನ ಹೊಂದಿ ಇಂದಿಗೆ ಆರು ವರ್ಷಗಳಾಯ್ತು. ಈ ಆರು ವರ್ಷಗಳಲ್ಲಿ ಅಪ್ಪು ಅವರನ್ನು ಅಭಿಮಾನಿಗಳು ಪ್ರತಿ ದಿನವೂ ನೆನಪಿಸಿಕೊಂಡಿದ್ದಾರೆ. ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ಕಟ್ಟಿದ್ದ ಪಿಆರ್ಕೆ ಅನ್ನು ಅದೇ ಘನತೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಜೊತೆಗೆ ಅಪ್ಪು ಪ್ರಾರಂಭಿಸಿದ್ದ ಸಾಮಾಜಿಕ ಕಾರ್ಯಗಳನ್ನು ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಂದು ಅಪ್ಪು ಪುಣ್ಯಸ್ಮರಣೆಯ ದಿನ ಅಪ್ಪು ಸಮಾಧಿಗೆ ಭೇಟಿ ನೀಡಿದ್ದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ರಾಘವೇಂದ್ರ ರಾಜ್ಕುಮಾರ್ ಸಹ ಜೊತೆಗಿದ್ದರು.
For More Updates Join our WhatsApp Group :
