ಮೈಸೂರು : ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿ ಎಲ್ಲದಕ್ಕೂ ಮಾನದಂಡಗಳಿವೆ. ಹೀಗಿರುವಾಗ ಯಾವುದಾದರೂ ಹುಚ್ಚ ಮಹಿಳೆಯರಿಗೆ ಯಾವ ಮಾನದಂಡವಿಲ್ಲದೆ ಪ್ರತಿ ತಿಂಗಳು 2 ಸಾವಿರ ಹಣ ಕೊಡುತ್ತಾನಾ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಅವರು, ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡಿತಿಗೂ ಫ್ರೀ ಅಂತಾರೆ. ಇದು ಯಾರ ಅಪ್ಪನ ಮನೆ ದುಡ್ಡಲ್ಲ ಸಿದ್ದರಾಮಯ್ಯನವರೇ, ಜನರ ತೆರಿಗೆ ಹಣ. ಈ ಮಂತ್ರಿಗಳೆಲ್ಲ ಯಾಕೆ ಬಾಯಿಮುಚ್ಚಿ ಕುಳಿತಿದ್ದಾರೋ ಗೊತ್ತಿಲ್ಲ. ಮಂತ್ರಿಗಳೇನು ಸಿಎಂ ಗುಲಾಮರಾ ಎಂದು ವಿಶ್ವನಾಥ್ ಕಿಡಿ ಕಾರಿದ್ದಾರೆ.
For More Updates Join our WhatsApp Group :




