ಅದ್ಧೂರಿಯಾಗಿ ನಡೆಯಿತು ಅರ್ಜುನ್ ಸರ್ಜಾ ಪುತ್ರಿ ಮದುವೆ

ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಇಂದು ತಮಿಳು ನಟ ಉಮಾಪತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈ ಹನುಮಾನ್ ದೇವಸ್ಥಾನದಲ್ಲಿ ಐಶ್ವರ್ಯಾ ಮತ್ತು ಉಮಾಪತಿ ಮದುವೆ ಜರುಗಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಹೊಸ ಬಂಧಕ್ಕೆ ಈ ಜೋಡಿ ಕಾಲಿಟ್ಟಿದೆ.

ಇನ್ನೂ ಜೂನ್ 14ರಂದು ನಡೆಯಲಿರುವ ಆರತಕ್ಷತೆಗೆ ಕನ್ನಡದ ಹೆಸರಾಂತ ನಟ ಜಗ್ಗೇಶ್ ಸೇರಿದಂತೆ ಅನೇಕರಿಗೆ ಆಮಂತ್ರಣ ನೀಡಿದ್ದಾರೆ ಅರ್ಜುನ್ ಸರ್ಜಾ ದಂಪತಿ. ಸ್ಯಾಂಡಲ್‌ವುಡ್ ಮತ್ತು ಸೌತ್‌ನ ಅನೇಕ ನಟ, ನಟಿಯರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿರುವ ಗಣ್ಯರಿಗೆ ಮದುವೆ ಆಹ್ವಾನ ನೀಡಿದ್ದಾರೆ

ಐಶ್ವರ್ಯಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು

ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ `ಪ್ರೇಮ ಬರಹ’ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು

Leave a Reply

Your email address will not be published. Required fields are marked *