ಉಮಾಪತಿ ಶ್ರೀನಿವಾಸ್ ಗೌಡ ಯಾವಾಗ ದರ್ಶನ್ ತೂಗುದೀಪ್ ವಿರುದ್ಧ ಮಾತನಾಡಿದರೋ ಆ ಕ್ಷಣದಿಂದಲೇ ಭಾರಿ ದೊಡ್ಡ ಗಲಾಟೆ ಶುರುವಾಗಿದೆ. ದರ್ಶನ್ ತೂಗುದೀಪ್ ಅಭಿಮಾನಿ ಬಳಗ & ಉಮಾಪತಿ ಶ್ರೀನಿವಾಸ್ ಗೌಡ ನಡುವೆ ಯುದ್ಧ ಶುರುವಾಗಿದೆ. ಇಂತಹ ಸಮಯದಲ್ಲೇ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ನಟ ದರ್ಶನ್ ತೂಗುದೀಪ್ ವಿಚಾರದಲ್ಲಿ ಸ್ಫೋಟಕ ಸಾಕ್ಷಿ ಸಿಕ್ಕಿಬಿದ್ದಿದೆ!
ಸರಿಯಾಗಿ 3 ವರ್ಷಗಳ ಹಿಂದೆ ಅಂದ್ರೆ 2021 ರಲ್ಲಿ ನಿರ್ಮಾಪಕ ಉಮಾಪತಿ & ನಟ ದರ್ಶನ್ ನಡುವೆ ದೊಡ್ಡ ಕಿರಿಕ್ ಆಗಿತ್ತು. ದೇಶಾದ್ಯಂತ ಈ ಸುದ್ದಿ ದೊಡ್ಡ ಸದ್ದು ಕೂಡ ಮಾಡಿತ್ತು. ಉಮಾಪತಿ ಶ್ರೀನಿವಾಸ್ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಸಿನಿಮಾ ಮ್ಯಾಟರ್ಗೆ ಶುರುವಾಗಿದ್ದ ಗಲಾಟೆ ಕೊನೆಗೆ ಬಂದು ನಿಂತಿದ್ದು ಮಾತ್ರ ಹೊಡಿ & ಬಡಿ ಎನ್ನುವ ಹಂತಕ್ಕೆ. ಹೀಗೆ ಒಬ್ಬರಿಗೆ ಮತ್ತೊಬ್ಬರು ಅಣ್ಣ & ತಮ್ಮ ರೀತಿಯೇ ಇದ್ದ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ದರ್ಶನ್ ತೂಗುದೀಪ್ ಹೊಡೆದಾಡಿಕೊಂಡಿದ್ದು ಉಂಟು ಎಂಬ ಆರೋಪವೂ ಇದೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ರ ಫ್ಯಾನ್ಸ್ ಉಮಾಪತಿ ವಿರುದ್ಧ ರೊಚ್ಚಿಗೆದ್ದು ಎಂತಹ ಮಹತ್ವದ ಸಾಕ್ಷಿ ತಂದಿದ್ದಾರೆ ಗೊತ್ತಾ?
ಉಮಾಪತಿ ವಿರುದ್ಧ ಮಹತ್ವದ ಸಾಕ್ಷಿ??
ದರ್ಶನ್ ತೂಗುದೀಪ್ ಸಿನಿಮಾ ‘ರಾಬರ್ಟ್’ ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ್ ಗೌಡಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಆದರೆ ಅದಕ್ಕೂ ಮೊದಲು ಸಿನಿಮಾ ನಿರ್ಮಿಸುವ ಸಮಯದಲ್ಲಿ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ದರ್ಶನ್ ತೂಗುದೀಪ್ ಬಗ್ಗೆ ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗುತ್ತಿದ್ದು. ಹಾಗೇ ದರ್ಶನ್ ಅವರ ಅಭಿಮಾನಿಗಳು ಈ ವಿಡಿಯೋ ಎಳೆದು ತಂದು ಛಡಿ ಏಟು ಕೊಡುತ್ತಿದ್ದೀವಿ ತಗೋ ಅಂತಿದ್ದಾರೆ.
ಉಮಾಪತಿ ಗೌಡ ಅವರು ಮಾತನಾಡಿದ್ದ ಹಳೆಯ ವಿಡಿಯೋದಲ್ಲಿ, ‘ನಾನು ಕೂಡ ದರ್ಶನ್ ಸರ್ ಫ್ಯಾನ್. ಇದೇ ಕಾರಣಕ್ಕೆ ನಾನು ನಿರ್ಮಾಪಕನಾಗಿ ಸಿನಿಮಾ ಮಾಡ್ತಿಲ್ಲ ನಿಮ್ಮ ಅಭಿಮಾನಿ ಆಗಿ ಈ ಸಿನಿಮಾ ಮಾಡುತ್ತಿದ್ದೀನಿ ಅಂತಾ ಹೇಳಿದ್ದೆ. ನಾನು 7ನೇ ಕ್ಲಾಸ್ ಓದುವಾಗಿನಿಂದ ಕೂಡ ದರ್ಶನ್ ಸರ್ ಫ್ಯಾನ್’ ಎಂಬುದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಈ ಹಿಂದೆ ‘ರಾಬರ್ಟ್’ ಚಿತ್ರದ ನಿರ್ಮಾಣ ಸಮಯದಲ್ಲಿ ಮಾತನಾಡಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ.