ಇಸ್ರೇಲ್ ವಿರುದ್ಧ ಆನ್‌ಲೈನ್‌ ಪೋಸ್ಟ್‌ ಮಾಡಿದ್ರೆ ಬಂಧನ

  • ಇಸ್ರೇಲ್ ವಿರುದ್ಧ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡುವಂತಿಲ್ಲ
  • ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ
  • ದ್ವಿಪಕ್ಷೀಯ ಬಾಂಧವ್ಯ ಹದಗೆಡಲಿದೆ ಎಂದು ಸೌದಿಅರೇಬಿಯಾ ಅಭಿಪ್ರಾಯ

ಸೌದಿ ಅರೇಬಿಯಾ :  ಸೌದಿ ಅರೇಬಿಯಾ ತನ್ನ ದೇಶದ ಪ್ರಜೆಗಳಿಗೆ ಹಾಗೂ ತನ್ನ ದೇಶದಲ್ಲಿ ನೆಲೆಸಿರುವ ವಿದೇಶೀಯರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇಸ್ರೇಲ್ – ಹಮಾಸ್ ಯುದ್ಧ ಸೇರಿದಂತೆ ಯಾವುದೇ ವಿಚಾರ ಸಂಬಂಧ ಇಸ್ರೇಲ್ ವಿರುದ್ಧ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಿದ್ರೆ ಬಂಧನ ಮಾಡೋದಾಗಿ ಹೇಳಿದೆ

ಸೌದಿ ಅರೇಬಿಯಾ ದೊರೆ ಅಲ್ಲಿನ ಸರ್ಕಾರಕ್ಕೆ ತಾಕೀತು ಮಾಡಿದ್ದು, ಪ್ರಜೆಗಳು ಯಾರಾದರೂ ಇಸ್ರೇಲ್ ವಿರುದ್ಧ ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಆನ್‌ಲೈನ್ ವೇದಿಕೆಯಲ್ಲಿ ಪೋಸ್ಟ್‌ ಮಾಡಿದರೆ ಅವರನ್ನು ಬಂಧಿಸಲು ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಸೂಚಿಸಿದ್ದಾರೆ

ಯಹೂದಿ ದೇಶವಾದ ಇಸ್ರೇಲ್ ಜೊತೆಗೆ ಉತ್ತಮ ದ್ವಿಪಕ್ಷೀಯ ಬಾಂಧವ್ಯ ಹಾಗೂ ರಾಜತಾಂತ್ರಿಕ ಸಂಬಂಧವನ್ನು ಕಾಯ್ದುಕೊಳ್ಳಲು ಸೌದಿ ಅರೇಬಿಯಾ ನಿರ್ಧರಿಸಿದೆ. ಈ ಹಂತದಲ್ಲಿ ಪ್ಯಾಲಿಸ್ತೀನ್ ಪರ ಪೋಸ್ಟ್‌ಗಳು, ಪ್ಯಾಲಿಸ್ತೀನ್ ಜನತೆಯ ಪರವಾದ ವಾದ ಮಂಡಿಸಿ ಇಸ್ರೇಲ್ ವಿರುದ್ಧ ದೋಷಾರೋಪ ಮಾಡಿದರೆ ದ್ವಿಪಕ್ಷೀಯ ಬಾಂಧವ್ಯ ಹದಗೆಡಲಿದೆ ಎಂದು ಸೌದಿ ಅರೇಬಿಯಾ ಅಭಿಪ್ರಾಯ ಹೊಂದಿದೆ

ಸೌದಿ ಅರೇಬಿಯಾದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಾಗೂ ರಾಜಕೀಯ ನಿಲುವುಗಳನ್ನು ಪ್ರದರ್ಶನ ಮಾಡೋದಕ್ಕೆ ಹಲವು ನಿರ್ಬಂಧಗಳಿವೆ. ಹೀಗಾಗಿ, 10 ವರ್ಷ ಮೇಲ್ಪಟ್ಟವರು ಯಾರಾದರೂ ಈ ರೀತಿಯ ಕೃತ್ಯ ಎಸಗಿದರೆ ಅವರನ್ನು ಬಂಧಿಸಬೇಕೆಂದು ಆದೇಶ ಮಾಡಲಾಗಿದೆ. ಯಾವುದೇ ಪೋಸ್ಟ್‌ಗೆ ಇಸ್ರೇಲ್ ವಿರೋಧಿ ಕಾಮೆಂಟ್ ಹಾಕಿದರೂ ಬಂಧನ ಖಚಿತ ಎಂದು ಸರ್ಕಾರ ಹೇಳಿದೆ

ಇಸ್ರೇಲ್‌ ಸೇನೆ ಗಾಜಾ ಪಟ್ಟಿಯಲ್ಲಿ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿರುವ ಪರಿಣಾಮ ಪ್ಯಾಲಿಸ್ತೀನ್‌ನಲ್ಲಿ ಈವರೆಗೆ 34 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಗಾಜಾ ಪಟ್ಟಿಯ ಹಮಾಸ್ ಸರ್ಕಾರ ಈ ಲೆಕ್ಕ ನೀಡಿದ್ದು, ಆಹಾರಕ್ಕಾಗಿ ಗಾಜಾದಲ್ಲಿ ಹಾಹಾಕಾರ ಇದೆ. ಆರೋಗ್ಯ ಸೇರಿದಂತೆ ಹಲವು ಮೂಲ ಸೌಕರ್ಯಗಳು ಇಲ್ಲಿನ ಜನತೆಗೆ ಗಗನ ಕುಸುಮವಾಗಿದೆ.

Click here to join Pragathi webportal Whatsapp group : https://chat.whatsapp.com/FgmwH9BYVs9IxV4fA1um2M

Leave a Reply

Your email address will not be published. Required fields are marked *