ಬೆಂಗಳೂರು: ಜಿಮ್ ಟ್ರೈನರ್ ಆಗಿರುವ ಪ್ರಶಾಂತ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಠಾಣಾ ಪೊಲೀಸರು ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ನ ಬಂಧಿಸಿದ್ದಾರೆ.
ನಡೆದಿದ್ದೇನು?: ಮೇ.26 ರಂದು ರಾತ್ರಿ ಪ್ರಾಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು.
ಹರ್ಷ ಮತ್ತು ಸುಭಾಷ್ ಎಂಬುವವರು ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿಸಿದ್ದು ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಧ್ರುವ ಸರ್ಜಾಗೆ ನಾಗೇಂದ್ರ ಚಾಲಕನಾಗಿಯೂ ಕೆಲಸ ಮಾಡಿದ್ದ. ನಾಗೇಂದ್ರಗೆ ಸಾಥ್ ಕೊಟ್ಟಿದ್ದೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್.
ಪ್ರಶಾಂತ್ ಪೂಜಾರಿ ಧ್ರುವ ಸರ್ಜಾಗೆ ಆಪ್ತರಾಗಿದ್ದರು. ಧ್ರುವಾಗೆ ಜಿಮ್ನಲ್ಲಿ ಟ್ರೇನ್ ಮಾಡುತ್ತಿದ್ದುದು ಇದೇ ಪ್ರಶಾಂತ್. ಇಬ್ಬರ ನಡುವಿನ ಆಪ್ತತೆಯನ್ನು ನಾಗೇಂದ್ರ ಹಾಗೂ ಅಶ್ವಿನ್ಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹಲ್ಲೆಗೆ ಪ್ಲ್ಯಾನ್ ರೂಪಿಸಿದ್ದನು.
ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದಕ್ಕೆ ಬಿಟ್ಟು ಅಶ್ವಿನ್ ಹಲ್ಲೆ ಮಾಡಿಸಿದ್ದ. ತನಿಖೆ ವೇಳೆ ಅಶ್ವಿನ್ ಪಾತ್ರ ಇರೋದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಅಶ್ವಿನ್ ಬಂಧಿಸಲಾಗಿದೆ.